ಮಕ್ಕಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ CRISP ಪತ್ರಿಕಾಗೋಷ್ಟಿ

ಮಕ್ಕಳ ಹಕ್ಕುಗಳ ಧ್ವನಿಯಾದ ಸರಕಾರೇತರ ಸಂಘ ಸಂಸ್ಥೆಯಾದ CRISP ನವೆಂಬರ್ 14 ರಂದು ಮಕ್ಕಳ ದಿನಾಚರಣೆಯ ಕುರಿತು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಟಿಯನ್ನು ಕರೆದಿತ್ತು. ಪತ್ರಿಕಾ ಗೋಷ್ಟಿಯಲ್ಲಿ ಸೇರಿದ್ದ ತಂದೆ, ತಾಯಿ, ಅಜ್ಜ, ಅಜ್ಜಿಯಂದಿರೆಲ್ಲರೂ ಸಮನಾದ ಪೋಷಣೆಯ ಅವಕಾಶವನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.

ಮಕ್ಕಳಿಗೆ ತಂದೆ ಹಾಗೂ ತಾಯಿ ಇಬ್ಬರ ಪೋಷಣೆಯೂ ಸಮನಾಗಿ ಸಿಗಬೇಕು. ಆದರೆ ಬೆಂಗಳೂರು ನಗರದಲ್ಲಿ ವಿಚ್ಚೇದನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮಕ್ಕಳು ಇದರಿಂದ ವಂಚಿತರಾಗುತ್ತಿದ್ದು, ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗುತ್ತಿದೆ.

ಕ್ರಿಸ್ಪ್ ಅಧ್ಯಕ್ಷ ಕುಮಾರ್ ಜಹಗೀರದಾರ್, ಫ್ಯಾಮಿಲಿ ಕೌನ್ಸೆಲರ್ ಮಧಿ ಇಳಂಗೋವನ್, ಸ್ವಾತಿ ಶುಕ್ಲಾ, ಮಂಜುಳಾ ನಾಯ್ಡು ಹಾಗೂ ಕುಟುಂಬ ನ್ಯಾಯಾಲಯದ ಅಡ್ವೊಕೇಟ್ ರಾಜಲಕ್ಷ್ಮಿ ಅಂಕಲಗಿ ಅವರು ಮಾತನಾಡಿದರು.

ಮಕ್ಕಳ ದಿನಾಚರಣೆ 2017 ರ ಸಂದರ್ಭದಲ್ಲಿ ಕ್ರಿಸ್ಪ್ ಸಂಸ್ಥೆಯಿಂದ ಪತಿಕಾ ಪ್ರಕಟಣೆ

ಮಕ್ಕಳ ದಿನಾಚರಣೆ

ನವೆಂಬೆರ್ 14 2017 ಈ ದಿನವನ್ನು ಮಕ್ಕಳ ದಿನ ಎಂದು ದೇಶದಾದ್ಯಂತ ಆಚರಿಸಲಾಗುತ್ತದೆ. ನಮ್ಮ ದೇಶದ ಮಾಜಿ ಪ್ರಧಾನಿಯಾದ ಶ್ರೀ ಜವಾಹರ್ ಲಾಲ್ ನೆಹರು ಇವರ ಜನ್ಮ ದಿನದ ಸವಿ ನೆನೆಪಿಗಾಗಿ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ಮುಖ್ಯ ದಿನವನ್ನು ಕ್ರಿಸ್ಪ್ ಮಕ್ಕಳೊಂದಿಗೆ ಆಚರಿಸುತ್ತಿದೆ. ಈ ಆಚರಣೆಯ ಹಿನ್ನೆಲೆಯಲ್ಲಿ ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾವು ಸಂಶೋದನೆಯ ಆಧಾರದ ಮೇಲೆ ಕೆಲವು ಮಾಹಿತಿಗಳನ್ನು ತಮ್ಮ ಮುಂದಿಡಲು ಇಚ್ಚಿಸುತ್ತೇವೆ. ಆಶ್ಚರ್ಯದ ಸಂಗತಿ ಎಂದರೆ ದೇಶದ 40% ಮಂದಿ ಮಕ್ಕಳಾದರೂ ವೋಟ್ ಬ್ಯಾಂಕ್ ಅಲ್ಲದೇ ಇರುವ ಕಾರಣ ಯಾವುದೇ ರಾಜಕೀಯ ಪಕ್ಷವು ಮಕ್ಕಳ ವಿಷಯದಲ್ಲಿ ಗಂಭೀರವಾದ ಧೋರಣೆ ತೋರುವುದೇ ಇಲ್ಲ!

ತಂದೆ ತಾಯಿ ಬೇರೆಯಾಗುವುದರಿಂದ ಅಥವಾ ವಿಚ್ಚೇದನಗೊಂಡದ್ದರಿಂದ ಓರ್ವ ಪೋಷಕನಿಂದ ದೂರವಾಗುವ ಮಕ್ಕಳು

ಇಂದಿನ ಸಮಾಜದಲ್ಲಿ ಅದರಲ್ಲೂ ನಗರಗಳಲ್ಲಿ ದಂಪತಿಗಳು ಬೇರೆಯಾಗುವ ಮತ್ತು ವಿಚ್ಚೆದನಗೊಳ್ಳುವ ಪ್ರಕರಣಗಳು ಅತೀ ಹೆಚ್ಕಾಗುತ್ತಿವೆ. ಇದಕ್ಕೆ ಕುಟುಂಬ ವಿರೋಧಿಯಾಗಿರುವ ನಮ್ಮ ಕಾನೂನು ಕೂಡ ಸಹಕಾರ ಮತ್ತು ಪ್ರಚೋದನೆ ಕೊಡುತ್ತಿದೆ. ಇವೆಲ್ಲದರ ಮಧ್ಯೆ ಮಕ್ಕಳು “ಎರಡೂ ಪೋಷಕರ ಜೊತೆ ಇರಬೇಕಾದ ಸಂಬಂಧ” – ಈ ಮುಖ್ಯ ಹಕ್ಕನ್ನು ಕಳೆದುಕೊಳ್ಳುತ್ತಿದಾರೆ. ಈ ವಿಕೃತ ಕಾನೂನುಗಳಿಂದಾಗಿ ಹೆಚ್ಚಿನ ಪ್ರಕರಣಗಳಲ್ಲಿ ತಂದೆಯಂದಿರು ಕೇವಲ “ವಿಸಿಟರ್” ಆಗಿ ಬಿಟ್ಟಿದ್ದಾರೆ. ಮತ್ತೆ ಕೆಲವು ಪ್ರಕರಣಗಳಲ್ಲಿ ಸಂಪೂರ್ಣವಾಗಿ ದೂರವಾಗಿ ಬಿಟ್ಟಿದ್ದಾರೆ. ಒಟ್ಟಿನಲ್ಲಿ ಸಮಾಜ ತಂದೆ-ರಹಿತ ಕುಟುಂಬಗಳ ಕಡೆ ಮುನ್ನುಗ್ಗುತ್ತಿದೆ. ಅನೇಕ ಸಂಸ್ಥೆಗಳು ನಡೆಸಿರುವ ಸಂಶೋಧನೆಯ ಪ್ರಕಾರ ತಂದೆಯ ಆಶ್ರಯವಿಲ್ಲದ ಮಕ್ಕಳ ಬಗ್ಗೆ ಕೆಲವು ಚಿಂತಾಜನಕ ಮಾಹಿತಿ ಉಪಲಬ್ದವಾಗಿವೆ. ಈ ಮಕ್ಕಳು:

  • ಆತ್ಮಹತ್ಯೆ ಮಾಡಿಕೊಳ್ಳುವ ಸಂಭವ 5 ಪಟ್ಟು ಹೆಚ್ಚು
  • ಹೈಸ್ಕೂಲ್ ನಲ್ಲೆ ಓದು ನಿಲ್ಲಿಸುವ ಸಾಧ್ಯತೆ 9 ಪಟ್ಟು ಹೆಚ್ಚು
  • ಅತ್ಯಾಚಾರಿಯಾಗಿ ಮಾರ್ಪಾಟಾಗುವ ಸಾಧ್ಯತೆ 14 ಪಟ್ಟು ಹೆಚ್ಚು
  • ಜೈಲು ವಾಸ ಮಾಡುವ ಹಾಗೂ ಮಾದಕ ಪದಾರ್ಥ ಸೇವನೆ ಮಾಡುವ ಸಾಧ್ಯತೆ 20 ಪಟ್ಟು ಹೆಚ್ಚು

ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಕ್ರಿಸ್ಪ್ ಸಂಸ್ಥೆ ಈ ಕೆಳಗಿನ ಬೇಡಿಕೆಗಳನ್ನುಮಂಡಿಸುತ್ತಿದೆ:

  • ಈಗಿರುವ ಮಹಿಳಾ ಮತ್ತು ಮಕ್ಕಳ ಸಚಿವಾಲಯವನ್ನು ಇಬ್ಬಾಗಗೊಳಿಸಿ ಮಕ್ಕಳಿಗೆ ಪ್ರತ್ಯೇಕವಾದ ಸಚಿವಾಲಯವನ್ನು ಪ್ರಾರಂಭಿಸಬೇಕು. ಮೇಲೆ ತೋರಿಸಿದ ಅಂಕಿ ಅಂಶಗಳಂತೆ ಮಕ್ಕಳ ಹಕ್ಕು ಹೆಂಗಸರ ಹಕ್ಕುಗಳಿಗಿಂತಾ ತೀರಾ ಭಿನ್ನವಾಗಿದೆ.
  • ಸಂಸತ್ತಿನಲ್ಲಿ 2012ರಲ್ಲಿ ಪಾಸಾದ “Protection of Children from Sexual Offences Act” http://wcd.nic.in/childact/childprotection31072012.pdf ಅಥವಾ POSCO ಆಕ್ಟ್ ಇದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು.ಈ ಕಾನೂನಿನ ಬಗ್ಗೆ ಜನರಲ್ಲಿ ಮತ್ತು ಪೋಷಕರಲ್ಲಿ ಜಾಹೀರಾತು ಮತ್ತು ಪೋಸ್ಟರ್ ಗಳ ಮೂಲಕ ಹೆಚ್ಚು ಪ್ರಚಾರಮಾಡಬೇಕು. ಮಕ್ಕಳ ಮೇಲಿನ ದೌರ್ಜನ್ಯ ಮಾಡಿದವರಿಗೆ ಆಗುವ ಶಿಕ್ಷೆಯ ಬಗ್ಗೆ ಮಾಹಿತಿಯನ್ನು ಪೋಲಿಸ್ ಸ್ಟೇಷನ್ಗಳಲ್ಲಿ ಮತ್ತು ಸರಕಾರಿ ಆಫೀಸ್ ಗಳಲ್ಲಿ ಪೋಸ್ಟರ್ ಗಳ ಮೂಲಕ ತಿಳಿಸಬೇಕು
  • ಬೇರೆಯಾದ ದಂಪತಿಗಳ ವಿಷಯದಲ್ಲಿ ಮಕ್ಕಳನ್ನು ಓರ್ವ ಪೋಷಕನಿಂದ ದೂರ ಮಾಡುವುದನ್ನು (parental alienation) ಕಾನೂನು ಬಾಹಿರ ಗೊಳಿಸಬೇಕು ಮತ್ತು ಹೀಗೆ ಮಾಡುವ ಪಾಲಕರ (custodial parent) ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇದೇ ಕಾರಣಕ್ಕಾಗಿ ಕೌಟುಂಬಿಕ ನ್ಯಾಯಾಲಗಳಲ್ಲಿ custody ವಿಷಯದಲ್ಲಿ ಮಕ್ಕಳ ಸಂದರ್ಶನ ಮಾಡುವುದನ್ನು ನಿಲ್ಲಿಸಬೇಕು.
  • Guardians & Wards Act ಈ ಕಾನೂನನ್ನು ಕೂಡಲೇ ತಿದ್ದುಪಡಿಗೆ ಒಳಪಡಿಸಿ ಎರಡೂ ಪೋಷಕರಿಗೆ ಸಮನಾದ ಪೋಷಣೆಯ ಅವಕಾಶವನ್ನು ಕಲ್ಪಿಸಬೇಕು. ಮಕ್ಕಳನ್ನು ಸಾಕುವ ವಿಷಯದ ವಿವಾದಗಳಲ್ಲಿ ಕೌಟುಂಬಿಕ ನ್ಯಾಯಾಲಯಗಳು ಕಡ್ಡಾಯವಾಗಿ 6 ತಿಂಗಳಲ್ಲಿ ನಿರ್ಧಾರ ನೀಡಬೇಕು.
  • ತಂದೆಯಂದಿರನ್ನು ಮಕ್ಕಳಿಂದ ಮತ್ತು ಕುಟುಂಬಗಳಿಂದ ದೂರ ಮಾಡುವ ದುರುದ್ದೇಶದಿಂದ ವರದಕ್ಷಿಣೆ, ಹಿಂಸೆ ಮತ್ತು ಅತ್ಯಾಚಾರದ ಸುಳ್ಳು ಆರೋಪಗಳನ್ನು ಹೇಯುವ ಜನರ ಮೇಲೆ ಕಟ್ಟುನಿಟ್ಟಾದ ಕಾನೂನು ಕ್ರಮ ಕೈಗೊಳ್ಳಬೇಕು.
  • ಸಾಮಾಜಿಕ ಹಾಗೂ ಕೌಟುಂಬಿಕ ಸುಧಾರಣೆಗಳನ್ನು ತರುವ ದೃಷ್ಟಿಯಿಂದ ಕ್ರಮ ಕೈ ಗೊಳ್ಳಬೇಕು. ಇದರಿಂದಾಗಿ ಮಕ್ಕಳನ್ನು ಬೆಳೆಸುವದರಲ್ಲಿ ಅಜ್ಜಿ-ಅಜ್ಜಂದಿರ ಜವಾಬ್ದಾರಿ ಹೆಚ್ಚಾಗುವುದಕ್ಕೆ ಪ್ರೋತ್ಸಾಹ ಕೊಡಬೇಕು ಮತ್ತು ಸಂಬಳಕ್ಕೆ ಇಟ್ಟು ಕೊಳ್ಳುವ ದಾದಿಯಂದಿರ ವಹಿವಾಟು ಕಮ್ಮಿಯಾಗುವ ದಿಶೆಯಲ್ಲಿ ಪ್ರಗತಿ ಕಾಣಬೇಕು.

Leave a Reply

Your email address will not be published.

Social Media Auto Publish Powered By : XYZScripts.com