ರಣಜಿ ಟ್ರೋಫಿ : ಗೌತಮ್ ಗಂಭೀರ್ ಶತಕ : ಡ್ರಾನತ್ತ ಸಾಗಿದ ಪಂದ್ಯ

ಹಾಸನ ಜಿಲ್ಲೆಯ ಆಲೂರಿನಲ್ಲಿ ಕರ್ನಾಟಕ ಹಾಗೂ ದೆಹಲಿ ತಂಡಗಳ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯುತ್ತಿದೆ. ಶನಿವಾರ ಮೂರನೇ ದಿನದಾಟದ ಅಂತ್ಯಕ್ಕೆ ದೆಹಲಿ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದೆ. ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ದೆಹಲಿಯ ಆರಂಭಿಕ ಬ್ಯಾಟ್ಸಮನ್ ಗೌತಮ್ ಗಂಭೀರ್ ಭರ್ಜರಿ ಶತಕ ಬಾರಿಸಿದರು.

237 ಎಸೆತಗಳನ್ನು ಎದುರಿಸಿದ ಗೌತಮ್ ಗಂಭೀರ್ 20 ಬೌಂಡರಿಗಳೊಂದಿಗೆ 135 ರನ್ ಬಾರಿಸಿದರು. ಅರ್ಧಶತಕ ಸಿಡಿಸಿದ ದೆಹಲಿಯ ಮತ್ತೊಬ್ಬ ಬ್ಯಾಟ್ಸಮನ್ ಧ್ರುವ್ ಶೋರೆ 64 ರನ್ ಗಳಿಸಿದರು. ಮೂರನೇ ದಿನದಾಟದ ಅಂತ್ಯಕ್ಕೆ ಗೌತಮ್ ಗಂಭೀರ್ (135*) ಹಾಗೂ ಮಿಲಿಂದ್ ಕುಮಾರ್ (10*) ಔಟಾಗದೇ ಕ್ರೀಸ್ನಲ್ಲಿದ್ದಾರೆ. ಕರ್ನಾಟಕದ ಪರವಾಗಿ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ 2, ಅಭಿಮನ್ಯು ಮಿಥುನ್ 1, ಗೌತಮ್ 1 ವಿಕೆಟ್ ಪಡೆದರು.

ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 649 ರನ್ ಗಳ ಬೃಹತ್ ಮೊತ್ತ ಸೇರಿಸಿತ್ತು. ಮಯಂಕ್ ಅಗರವಾಲ್ (176) ಹಾಗೂ ಸ್ಟುವರ್ಟ್ ಬಿನ್ನಿ (118) ಅಮೋಘ ಶತಕ ಗಳಿಸಿದ್ದರು. ಇನ್ನೂ ಒಂದು ದಿನದ ಆಟ ಬಾಕಿಯಿದ್ದು ಪಂದ್ಯ ಡ್ರಾ ಆಗುವ ಸಾಧ್ಯತೆ ಹೆಚ್ಚಿದೆ.

Leave a Reply

Your email address will not be published.

Social Media Auto Publish Powered By : XYZScripts.com