Election ಗಾಗಿ ಚೆಕ್ ಪೋಸ್ಟ್ ಗಳಲ್ಲಿ ವಸೂಲಿಗಿಳಿದಿದೆ ಸರ್ಕಾರ ; ನಿಲ್ಲಿಸದಿದ್ದರೆ ಇಚ್ಚರ-HDK..

ಬೆಂಗಳೂರು : ರೌಡಿಗಳ ಮೂಲಕ ಚೆಕ್ ಪೋಸ್ಟ್ ಗಳಲ್ಲಿ ಹಣ ವಸೂಲಿ ಮಾಡಿ ಮುಂದಿನ ಚುನಾವಣೆಗೆ ಕಾಂಗ್ರೆಸ್ ಸರ್ಕಾರ ಸಿದ್ದತೆ ನಡೆಸುತ್ತಿದೆ. ಚೆಕ್ ಪೋಸ್ಟ್ ಬಂದ್ ಮಾಡದಿದ್ರೆ ನಾವೇ ದಾಳಿ ಮಾಡ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.


ಜಯಪ್ರಕಾಶ್ ನಾರಾಯಣ್ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ಜಿಎಸ್ ಟಿ ಜಾರಿಯಾದ ಬಳಿಕ ಚೆಕ್ ಪೋಸ್ಟ್ ಬಂದ್ ಮಾಡಲಾಗಿದೆ.ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಚೆಕ್ ಪೋಸ್ಟ್ ರದ್ದು ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಮಾತ್ರ ಚೆಕ್ ಪೋಸ್ಟ್ ಗಳನ್ನ ಬಂದ್ ಮಾಡಿಲ್ಲಾ. ದಿನಕ್ಕೆ ೩೦ ಲಕ್ಷ ರೂಪಾಯಿವರೆಗೂ ರೌಡಿಗಳ ಮೂಲಕ ವಸೂಲಿ ಮಾಡಲಾಗುತ್ತಿದೆ. ಈ ಸರ್ಕಾರ ಸಾವಿರಾರು ಕೋಟಿ ದಂಧೆ ನಡೆಸುತ್ತಿದೆ. ಇದು ಸಿಎಂ ಗಮನಕ್ಕೆ ಬಂದಿಲ್ವಾ. ಗೃಹ ಹಾಗೂ ಸಾರಿಗೆ ಸಚಿವರೇ ಇದಕ್ಕೆ ಜವಾಬ್ದಾರರು ಎಂದು ಆರೋಪಿಸಿದರು.

ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲೂ ಅನೇಕ ಶಾಸಕರು ಅಸಮಾಧಾನಗೊಂಡಿದ್ದಾರೆ. ಕೆಲವರು ನೇರವಾಗಿಯೇ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಮಾಲಕರೆಡ್ಡಿ ಸಚಿವ ಪ್ರಿಯಾಂಕ್ ಖರ್ಗೆ ಆಡಳಿತದ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಆನಂದ್ ಆಸ್ನೋಟಿಕರ್ ಜೆಡಿಎಸ್ ಸೇರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದರು.

ಹಾಗೆಯೇ ಸಿಎಂ ವಿರುದ್ದ ಢೋಂಗಿ ಎಂಬುದು ಸಿದ್ದರಾಮಯ್ಯಗೆ ಬಹಳ ಪ್ರಿಯವಾದ ಪದ.ವಿರೋಧ ಪಕ್ಷಗಳನ್ನ ಟೀಕಿಸಲು ಪದೇ ಪದೇ ಢೋಂಗಿ ಪದ ಬಳಸ್ತಾರೆ.ಸಮಾಜವಾದಿ ಹಿನ್ನೆಲೆಯಿಂದ ಬಂದಿರುವುದಾಗಿ ಹೇಳ್ತಾರೆ.ಆದರೆ ೫೦ ಸಾವಿರ ರೂ. ಮೌಲ್ಯದ ಶೂ ಬಳಸುತ್ತಾರೆ. ಇವರದ್ದು ಢೋಂಗಿ ಸಮಾಜವಾದವಲ್ಲವೇ ಎಂದು ಪ್ರಶ್ನಿಸಿದರು.

 

Leave a Reply

Your email address will not be published.

Social Media Auto Publish Powered By : XYZScripts.com