ಉಫ್‌…..ಬಿಗ್‌ಬಾಸ್‌ನ ನಿವೇದಿತಾ ಮದುವೆಯಾಗೋ ಹುಡುಗನಿಗೆ ಈ ಎಲ್ಲಾ ಲಕ್ಷಣಗಳಿರಬೇಕಂತೆ…?!!

ಬಿಗ್‌ಬಾಸ್ ಸೀಸನ್‌ 5ರ ಸ್ಪರ್ಧಿ ಬಾರ್ಬಿ ಡಾಲ್‌ ಎಂದೇ ಖ್ಯಾತಿ ಪಡೆದಿರುವ ನಿವೇದಿತಾ ಗೌಡ ಭಾರೀ ಸುದ್ದಿಮಾಡುತ್ತಿದ್ದಾರೆ. ಟ್ರೋಲ್‌ ಪೇಜ್‌ಗಳಿಗೆ ಆಹಾರವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿರುವ ನಿವೇದಿತಾ ತಾವು ಮದುವೆಯಾಗುವ  ಹುಡುಗ ಹೇಗಿರಬೇಕು ಎಂಬುದನ್ನು ಹೇಳಿದ್ದಾರೆ.

ಶುಕ್ರವಾರದ ಎಪಿಸೋಡ್‌ನಲ್ಲಿ ಬಿಗ್‌ಬಾಸ್ ಮನೆಯ ಒಳಗೆ ನೀನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ನಿವೇದಿತಾಗೆ ದಿವಾಕರ್‌, ಜಗನ್‌, ಜೆಕೆ ಹಾಗೂ ಚಂದನ್ ಕೇಳಿದ್ದಾರೆ. ಅದಕ್ಕೆ ನಿವೇದಿತಾ ನನ್ನ ಹುಡುಗ ನನಗಿಂತ ಸ್ಪಲ್ಪ ಎತ್ತರವಿರಬೇಕು. ನನ್ನನ್ನು ತುಂಬಾ ಪ್ರೀತಿಸಬೇಕು. ಆದರೆ ಅದನ್ನು ತೋರಿಸಿಕೊಳ್ಳಬಾರದು. ಸಿಕ್ಸ್ ಪ್ಯಾಕ್‌ ಬಾಡಿ ಇಲ್ಲದಿದ್ದರೂ ಅಡ್ಡಿ ಇಲ್ಲ. ಅಚ್ಚು ಕಟ್ಟಾದ ಮೈಕಟ್ಟಿರಬೇಕು. ಒಂದು ಕಾರು ಇರಬೇಕು. ಮದ್ಯಮ ವರ್ಗದವನಾದರೂ ಪರವಾಗಿಲ್ಲ. ಕಷ್ಟು ಇರಬಾರದು. ಯಾವುದೇ ಚಿಂತೆ ಇಲ್ಲದೆ ಆರಾಮಾಗಿರಬೇಕು. ಯಾವಾಗಲೂ ಖುಷಿಯಾಗಿರಬೇಕು ಎಂದಿದ್ದಾರೆ.

ಜೊತೆಗೆ ಹುಡುಗ ಡಾಕ್ಟರ್‌ ಆಗಿರಬಾರದು, ನಟನಾಗಿರಬಾರದು. ಯಾಕೆಂದರೆ ಅವರು ನನ್ನ ಜೊತೆ ಜಾಸ್ತಿ ಸಮಯ ಕಳೆಯಲು ಆಗುವುದಿಲ್ಲ. ನಟರಾದರೆ ಬೇರೆ ಹುಡುಗಿಯರ ಜೊತೆ ನಟಿಸುತ್ತಾರೆ ಅದು ನನಗೆ ಇಷ್ಟವಿಲ್ಲ. ನನಗೆ ಜೆಲಸ್‌ ಆಗುತ್ತದೆ. ಹುಡುಗನಿಗೆ ನನ್ನ ಬಗ್ಗೆ ಜೆಲಸ್‌ಇರಬೇಕು, ಬೇಕೆನಿಸಿದಾಗ ಶಾಪಿಂಗ್‌ ಕರೆದುಕೊಂಡು ಹೋಗಬೇಕು. ಆಗಾಗಾ ನನಗೆ ಸರ್ಪೈಸ್‌ ನೀಡಬೇಕು……….ಹೀಗೆ ಸಾಕಷ್ಟು ಬೇಡಿಕೆಗಳನ್ನು ಹೇಳಿ ಬಳಿಕ ಇಂಥಾ ಹುಡುಗ ಸಿಕ್ಕರೆ ಮದುವೆಯಾಗುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.