ಬೆಂಗಳೂರಿನಲ್ಲಿ ಉಪೇಂದ್ರ ಸುದ್ದಿಗೋಷ್ಟಿ : ಪ್ರಜಾಕೀಯ Website, App ಲೋಕಾರ್ಪಣೆ

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಅಧ್ಯಕ್ಷ, ನಟ ಉಪೇಂದ್ರ ಸುದ್ದಿಗೋಷ್ಟಿ ನಡೆಸಿದ್ದಾರೆ. ಮೈಕೋ ನವೀನ್ ಮತ್ತು ಸ್ನೇಹಿತರು ವೆಬ್ ಸೈಟ್ ಡಿಸೈನ್ ಮಾಡಿದ್ದಾರೆ ಎಂದು ಹೇಳಿದ ಉಪ್ಪಿ ಆ್ಯಪ್ ನಲ್ಲಿರೋ ಡಿಟೈಲ್ಸ್ ಗಳನ್ನು ವಿವರಿಸಿದರು. ಇಂದಿನ ಕಾರ್ಯಕ್ರಮದಿಂದ ಕುಟುಂಬ ಸದಸ್ಯರನ್ನು ಉಪೇಂದ್ರ ಹೊರಗಿಟ್ಟಿದ್ದರು.

ಪ್ರಜಾಕೀಯ ವೆಬ್ ಸೈಟ್ ಲೋಕಾರ್ಪಣೆಗೊಳಿಸಲಾಯಿತು. ನಗ್ನ ಸತ್ಯ ಎಂಬ ಹೆಡ್ ನಲ್ಲಿ ಅಭ್ಯರ್ಥಿಗಳ ಮಾನದಂಡದ ಬಗ್ಗೆ ಹಲವು ಮಾಹಿತಿ ನೀಡಲಾಗಿದೆ.
Www.Kpjpuppi.org.in ವೆಬ್ ಸೈಟ್ ನಲ್ಲಿ ಜನರಿಗೆ ಮಾಹಿತಿ ನೀಡಲು ಅವಕಾಶ ಒದಗಿಸಲಾಗಿದೆ. ಅಭ್ಯರ್ಥಿಯಾಗುವವರು ಇದರಲ್ಲಿ ಡಿಟೇಲ್ಸ್ ಅಪ್ಡೇಟ್ ಮಾಡಬೇಕು. ಉಪೇಂದ್ರ ಆ್ಯಂಡ್ರಾಯ್ಡ್ ಆ್ಯಪ್ ಕೂಡ ಲಾಂಚ್ ಮಾಡಿದ್ದಾರೆ.

‘ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದಕ್ಕೆ ಪರಿಹಾರ ಕೂಡಾ ಪಟ್ಟಿ ಮಾಡಿ ಕಳುಹಿಸಿ. ಪಕ್ಷಕ್ಕೆ ಸೇರಬಯಸುವವರಿಗೆ ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ. ಗ್ರಾಮ ಪಂಚಾಯ್ತಿ, ನಗರ ಸಭೆ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಶಾಸಕ ಕ್ಯಾಂಡಿಡೇಟ್ಸ್ ನಮ್ಮ ವೆಬ್ ಗೆ ಡಿಟೇಲ್ಸ್ ಕಳಿಸಬಹುದು. ಎಲ್ಲ ೨೨೪ ಕ್ಷೇತ್ರಗಳಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಅಭ್ಯರ್ಥಿಗಳ ಆಯ್ಕೆಗೆ ಇಂತದ್ದೇ ಎಂಬ ಮಾನದಂಡವಿಲ್ಲ. ಅವಿದ್ಯಾವಂತರಿಗೂ ಪಕ್ಷದಲ್ಲಿ ಅವಕಾಶವಿರಲಿದೆ. ಒಂದು ತಿಂಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಡೆಡ್ ಲೈನ್ ನೀಡಲಾಗಿದೆ.

‘ ಜಾತಿ ನಾವು ಮಾಡಿದ್ದಲ್ಲ, ಸಂವಿಧಾನಕ್ಕನುಗುಣವಾಗಿ ಕಾಲಂ ಇಟ್ಟಿದ್ದೇವೆ. ನಮ್ಮ ಪಕ್ಷದಲ್ಲಿ ಜಾತಿ, ವರ್ಗಕ್ಕೆ ಅವಕಾಶವಿಲ್ಲ. ಮಹಿಳೆಯರು ಕೂಡ ನಮ್ಮ ಪಕ್ಷಕ್ಕೆ ಅಭ್ಯರ್ಥಿಯಾಗಿ ಬರಲು ಆಸಕ್ತಿ ತೋರಿಸಿದ್ದಾರೆ. ಮಹಿಳೆಯರಿಗೂ ಮುಕ್ತ ಅವಕಾಶ ನಮ್ಮಲಿದೆ. ಒಳ್ಳೆ ಒಳ್ಳೆ ಐಡಿಯಾಗಳನ್ಮು ತೆಗೆದುಕೊಂಡು ಬನ್ನಿ ‘ ಎಂದು ಉಪ್ಪಿ ಕರೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com