ಜನಾನುರಾಗಿ ನಾಯಕ ಟಿಪ್ಪುವನ್ನು ಮತ್ತೆ ಮತ್ತೆ ಕೊಲ್ಲುತ್ತಿದ್ದಾರೆ ಮತಾಂಧ ಭಕ್ತರು….

ಛೆ, ಎಂಥ ವಿಪರ್ಯಾಸ ನಮಗಾಗಿ ಹೋರಾಡಿದ ಒಬ್ಬ ಮಹಾನ್ ಪುರುಷನನ್ನ ಯಾವ ಮಟ್ಟಕ್ಕೆ ಇಳಿದು ಟೀಕಿಸುತ್ತಿದ್ದೇವೆ, ಅವಮಾನಿಸುತ್ತಿದ್ದೇವೆ, ಅನುಮಾನಿಸುತ್ತಿದ್ದೇವೆ. ಟಿಪ್ಪು ಸುಲ್ತಾನ್ ಈ ರಾಜ್ಯವನ್ನ ಆಡಳಿತ ಮಾಡಿದ ರೀತಿ ರಿವಾಜುಗಳನ್ನ ಸಣ್ಣದಾಗಿ ಗಮನಿಸಿದರೂ, ಆ ಅರಸನ ಮೇಲೆ ಗೌರವ ಇಮ್ಮಡಿಗೊಳ್ಳಬೇಕು. ಆದರೆ ಇಂದು ರಾಜಕೀಯಕಾರಣಕ್ಕಾಗಿ, ರಾಜಕೀಯ ಉದ್ದೇಶಗಳ ಈಡೇರಿಕೆಗಾಗಿ ಜನರನ್ನು ದಾರಿತಪ್ಪಿಸುತ್ತಿರುವುದು, ಅಷ್ಟೇ ಅಲ್ಲದೇ ಆ ಮಹಾನ್ ಪುರುಷನಿಗೆ ಅವಮಾನಗೈಯುತ್ತಿರುವುದು ಸಾಮಾಜಿಕ ದುರಂತವೇ ಸರಿ. ಮಂಗಳೂರಿನ ಕಡೆಯಿಂದ ಕ್ರಿಶ್ಚಿಯನ್ನರ ಮೇಲೆ ದಾಳಿ ಮಾಡಿರುವ ಆರೋಪ.

ಕೊಡಗಿನ ಕಡೆಯಿಂದ ಕೊಡವರನ್ನ ಹತ್ಯೆ ಮಾಡಿರುವ ಆರೋಪ. ಇನ್ನುಳಿದಂತೆ ಬ್ರಾಹ್ಮಣರ ಮೇಲೆ ದಬ್ಬಾಳಿಕೆ ನಡೆಸಿರುವ ಆರೋಪ. ಟಿಪ್ಪುವಿನ ಆಡಳಿತವನ್ನ ಸೂಕ್ಷ್ಮವಾಗಿ ಗಮನಿಸಿದರೂ ಅರ್ಥವಾಗುತ್ತದೆ. ಟಿಪ್ಪು ಎಲ್ಲರಂತೆ ಮಾಮೂಲಿಯಾಗಿ ಆಡಳಿತ ನಡೆಸಲಿಲ್ಲ. ಟಿಪ್ಪುವಿನ ಆಡಳಿತ ಅತ್ತ್ಯದ್ಭುತ. ಒಬ್ಬ ಆಡಳಿತ ನಡೆಸುವ ರಾಜ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಅಷ್ಟೇ ಅಲ್ಲದೇ, ಜನರ ಸೂಕ್ಷ್ಮ ಸಂವೇದನೆಗಳಿಗೆ ಧ್ವನಿಯಾಗಿ ಆಡಳಿತ ನಡೆಸಬೇಕು. ಆ ವಿಚಾರದಲ್ಲಿ ಟಿಪ್ಪುವನ್ನ ಇಂದಿಗೂ ನಾವು ಸ್ಮರಿಸಬೇಕು, ಆರಾಧಿಸಬೇಕು. ಮಂಗಳೂರಿನ ಭಾಗದಲ್ಲಿ ಬ್ರಿಟೀಷರಿಗೆ ಬೆಂಬಲಿಸುತ್ತಿದ್ದ ಒಂದಷ್ಟು ಕ್ರಿಶ್ಚಿಯನ್ನರನ್ನ ಶಿಕ್ಷೆಗೊಳಪಡಿಸಿರುವುದನ್ನು ಯಾವ ಆಧಾರದ ಮೇಲೆ ತಪ್ಪು ಎಂದು ಪರಿಗಣಿಸುತ್ತೀರಿ? ಕೊಡಗಿನಲ್ಲಿ ಇಂದಿಗೂ ಅಸಮಾನತೆ ಇರುವಾಗ ಅಂದು ಆ ಕಾಲದಲ್ಲಿ ಯಾವ ಮಟ್ಟಕ್ಕೆ ಅಸಮಾನತೆ ಇದ್ದಿರಬಹುದು. ಆ ಸಂದರ್ಭದಲ್ಲಿ ಒಬ್ಬ ಜನಾನುರಾಗಿ ಆಡಳಿತಗಾರನಾಗಿ ಜನಸಾಮಾನ್ಯರ ನೋವಿಗೆ ಸ್ಪಂದಿಸಿರುವುದನ್ನು ಇಂದು ಕೊಡವರ ಮೇಲೆ ದಾಳಿ ಎನ್ನುತ್ತೀರಿ ಎಂದರೆ ಅದು ಸಾಮಾಜಿಕ ದುರಂತವಲ್ಲದೇ ಮತ್ತೇನು. ಇಂದಿಗೂ ಹಳ್ಳಿ ಹಳ್ಳಿಗಳಲ್ಲಿ ದಲಿತರನ್ನ, ಹಿಂದುಳಿದ ವರ್ಗವನ್ನು, ಮನುಷ್ಯರನ್ನಾಗಿ ನೋಡುತ್ತಿಲ್ಲ.

ಸಾಮಾಜಿಕ ವಿಚಾರದಲ್ಲಿ ಹೀನಾಯವಾಗಿ ನಡೆಸಿಕೊಳ್ಳುವುದನ್ನು ಗಮನಿಸುತ್ತಿದ್ದೇವೆ. ಇನ್ನು ಆ ಕಾಲದಲ್ಲಿ ಆ ರೀತಿಯ ಶೋಷಣೆ ದಲಿತರಾದಿಯಾಗಿ ಎಲ್ಲಾ ವರ್ಗದ ಮೇಲೂ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಶೋಷಿತರ ಧ್ವನಿಯಾಗಿ ಶೋಷಣೆ ಮಾಡುವವರ ಮೇಲೆ ಎಲ್ಲಾ ಪ್ರಜೆಗಳ ತಂದೆಯ ಸ್ಥಾನದಲ್ಲಿರುವ ದೊರೆ, ಕ್ರಮಕೈಗೊಂಡಿರುವುದನ್ನ ಹಿಂದೂಗಳ ಮೇಲೆ ದಬ್ಬಾಳಿಕೆ ಎಂದು ನೀವು ಕರೆಯುತ್ತೀರಿ ಎಂದರೆ, ನೀವು ಶೋಷಣೆಯ ಪರ ದಬ್ಬಾಳಿಕೆಯ ಪರ ಎಂದೇ ಅರ್ಥ. ಅಂದಿನ ಕಾಲದಲ್ಲಿ ಟಿಪ್ಪು ಜಾರಿಗೊಳಿಸಿರುವ ಕಾನೂನುಗಳು ಇಂದಿಗೂ ಪ್ರಸ್ತುತ. ಇಂದಿರಾಗಾಂಧಿ ಪರಿಣಾಮಕಾರಿಯಾಗಿ ಜಾರಿಗೊಳಿಸಿರುವ ಉಳುವವನಿಗೆ ಭೂಮಿ ಅಂದಿನ ಕಾಲದಲ್ಲಿ ಟಿಪ್ಪು ಜಾರಿಗೊಳಿಸಿರುವುದು.ಅಂದು ಉಳುವವನಿಗೆ ಭೂಮಿ ಜಾರಿಗೊಳಿಸಿರುವ ಟಿಪ್ಪು ಭೂ ಮಾಲಿಕರ ವಿರೋಧ ಕಟ್ಟಿಕೊಳ್ಳಬೇಕಾಯಿತು.

ಕೇರಳ ಸೇರಿದಂತೆ ಕರ್ನಾಟಕದಲ್ಲೂ ದಲಿತ ಮಹಿಳೆಯರು ಮೇಲ್ವಸ್ತ್ರ ಧರಿಸುವಂತಿರಲಿಲ್ಲ. ಆದರೆ ಟಿಪ್ಪು ಈ ರೀತಿ ಶೋಷಣೆ ಮಾಡುತ್ತಿದ್ದವರ ಮೇಲೆ ಕಠಿಣಕ್ರಮಕೈಗೊಂಡು ಶಿಕ್ಷಿಸಿರುವುದು ಹಿಂದೂ ವಿರೋಧಿಯಾಗಲು ಹೇಗೆ ಸಾದ್ಯ. ಈ ರೀತಿ ಹಲವಾರು ಪರಿಣಾಮಕಾರಿ ಯೋಜನೆಗಳನ್ನ ಜಾರಿಗೊಳಿಸಿರುವ ಟಿಪ್ಪು, ಯಾವುದೇ ಧರ್ಮದ ಅನುಯಾಯಿ ಎಂದು ಹೇಳಲು ಸಾದ್ಯವೇ ಇಲ್ಲ. ಹಲವಾರು ಹಿಂದೂ ದೇವಾಲಯಗಳ ಜೀರ್ಣೊದ್ದಾರಕನಾಗಿರುವ ಟಿಪ್ಪು ಹಿಂದೂ ವಿರೋಧಿಯಾಗಲು ಹೇಗೆ ಸಾದ್ಯ?. ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಟಿಪ್ಪು ಪಚ್ಚಲಿಂಗ ಸ್ಥಾಪನೆ ಮಾಡಿದ್ದು, ಜನ ಇಂದಿಗೂ ಪಚ್ಚಲಿಂಗವನ್ನ ಬಾಯಿ ಮಾತಿಗೆ ಟಿಪ್ಪು ಲಿಂಗವೆಂದೇಕರೆಯುತ್ತಾರೆ. ದೇವನಹಳ್ಳಿಯಲ್ಲಿರುವ ಟಿಪ್ಪುವಿನ ಕೋಟೆಯೊಳಗೆ ವೇಣುಗೋಪಾಲ ಸ್ವಾಮಿ ಸ್ಥಾಪನೆಯಾಗಲು ಹೇಗೆ ಸಾದ್ಯ. ತಮಿಳುನಾಡಿನ ನಾಮಕಲ್‍ ಕೋಟೆಯಲ್ಲಿ ರಂಗನಾಥ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇವಸ್ಥಾನಗಳ ಸ್ಥಾಪನೆ ಮಾಡಿರುವುದನ್ನಯಾಕೆ ಮರೆಯುತ್ತಿದ್ದೇವೆ. ಬಾದಾಮಿಯ ಮಾತಾಪಿ, ಬೆಂಗಳೂರು ಕೋಟೆಯಲ್ಲಿರುವ ಗಣೇಶ ದೇವಸ್ಥಾನ, ಅದೇ ರೀತಿ ಶೃಂಗೇರಿ ಮಠಕ್ಕೆ ಮರಾಠದಿಂದ ದಾಳಿಯಾದಾಗ, ಪೀಠವನ್ನ ಕಾಪಾಡಿಕೊಂಡಿರುವುದು ಅಲ್ಲದೇ, ಜೀರ್ಣೊದ್ದಾರಕ್ಕೆ ಟೊಂಕಕಟ್ಟಿ ನಿಂತ ಟಿಪ್ಪು ಸುಲ್ತಾನ್‍ಒಬ್ಬ ಹಿಂದೂ ವಿರೋಧಿ ಎನ್ನಲು ಮನಸ್ಸಾದರೂ ಹೇಗೆ ಬರುತ್ತದೆ.

ಒಬ್ಬ ರಾಜನಾಗಿ, ದೊರೆಯಾಗಿ ಸರ್ವಧರ್ಮವನ್ನ ಸಮಾನವಾಗಿ ಬೆಳೆಸಿದ ಕೀರ್ತಿ ಟಿಪ್ಪುಸುಲ್ತಾನ್ ಗೆ ಸಲ್ಲುತ್ತದೆ. ಹಲವಾರು ಬೇರೆ ಬೇರೆ ದೇಶಗಳೊಂದಿಗೆ ಸಂಬಂಧ ಸಂಪರ್ಕವನ್ನು ಇಟ್ಟುಕೊಂಡಿದ್ದ ಟಿಪ್ಪುಸುಲ್ತಾನ್‍ ಒಬ್ಬ ಮಾಮೂಲಿ ದೊರೆಯಾಗಲು ಸಾದ್ಯವೇ ಇಲ್ಲ. ಅಂದೇ ರಾಜ್ಯಕ್ಕೆ ಚೀನಾದಿಂದ ರೇಷ್ಮೆ ತಳಿಗಳನ್ನ ಆಮದು ಮಾಡಿಕೊಂಡ ಕೀರ್ತಿಟಿಪ್ಪು ಸುಲ್ತಾನ್‍ಗೆ ಸಲ್ಲಬೇಕು. ಟಿಪ್ಪು ಅಧಿಕಾರಕ್ಕೆ ಬಂದ ವರ್ಷ1782. ಟಿಪ್ಪುಅಧಿಕಾರಕ್ಕೇರುವ 82 ವರ್ಷಗಳ ಹಿಂದೆಯೇ ಮೈಸೂರು ಸಂಸ್ಥಾನ ಮೊಘಲರ ಗುಲಾಮಗಿರಿಯಲ್ಲಿತ್ತು. ಮೊಘಲ್‍ ರಾಜರಿಗೆ ಕಪ್ಪಕಾಣಿಕೆ ಸಲ್ಲಿಸಬೇಕಾಗಿತ್ತು. ಆದರೆ ಹೈದರಾಲಿಯ ನಂತರ ಟಿಪ್ಪು ಸುಲ್ತಾನ್‍ರಾ ಜ್ಯವನ್ನ40,000 ಚದರ ಕಿಲೋ. ಮೀ. ಇದ್ದ ರಾಜ್ಯವನ್ನು 80,000 ಚದರ ಕಿಲೋ.ಮೀ. ಗೆ ವಿಸ್ತರಿಸಿರುವುದು. ಅಷ್ಟೇ ಅಲ್ಲದೇ ಕನ್ನಡ ನಾಡನ್ನು ಗುಲಾಮಗಿರಿಯಿಂದ ಹೊರತಂದು ಸ್ವತಂತ್ರವಾದ ಕಾನೂನು, ಸ್ವತಂತ್ರವಾದ ಆಡಳಿತ. ಇವತ್ತಿನ ಆಡಳಿತದಲ್ಲಿರುವ ಕುಮ್ಕಿ, ಹಿಸ್ಸಾ, ಪಹಣಿ, ಇವೆಲ್ಲಾ ಪದಗಳು ಟಿಪ್ಪು ಆಡಳಿತದ ಭಾಗ. ಅಷ್ಟೇ ಅಲ್ಲದೇ ಪ್ರಪಂಚದಲ್ಲೇ ಸೈನಿಕರಿಗೆ ಭೂಮಿ ಹಂಚಿದ ಮೊದಲ ಅರಸ. ಈ ರೀತಿ ಅದ್ಭುತವಾಗಿ ಆಡಳಿತ ನಡೆಸಿರುವ ಅರಸನನ್ನು ಜನ ವಿರೋಧಿ ಹಿಂದೂ ವಿರೋಧಿ, ಅನ್ನುತ್ತೀರಲ್ಲ. ಬ್ರಿಟೀಷರ ಮೇಲೆ ನಾಲ್ಕು ಯುದ್ದಗಳನ್ನ ಸಾರಿ, ತನ್ನೊಂದಿಗೆ ಇದ್ದ ಕುತಂತ್ರಿಗಳ ಷಡ್ಯಂತ್ರಕ್ಕೆ ಬಲಿಯಾಗಿ ತನ್ನ ಮಕ್ಕಳನ್ನು  ಬಲಿಕೊಡುವ ಪರಿಸ್ಥಿತಿ ಬಂದರೂ, ಕನ್ನಡ ನಾಡಿನ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಕಾಪಾಡಿದ ಆ ಮಹಾನ್ ವೀರನನ್ನು ಶಪಿಸಲು ಮನಸ್ಸಾದರು ಹೇಗೆ ಬರುತ್ತದೆ.

ಝಾನ್ಸಿರಾಣಿ ಲಕ್ಷೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮರನ್ನು ಸ್ವತಂತ್ರ ಹೋರಾಟಗಾರರ ಸಾಲಿನಲ್ಲಿ ಸ್ಮರಿಸುವ ನೀವು ಟಿಪ್ಪು ಸುಲ್ತಾನ್ ವಿಚಾರದಲ್ಲಿ ಯಾಕೆ ದಂದ್ವ ನಿಲುವು?. ನೀವೆಲ್ಲಾ ಆರೋಪಿಸುವಂತೆ ಟಿಪ್ಪು ಸುಲ್ತಾನ್‍ ಏನಾದರೂ ಹಿಂದೂ ವಿರೋಧಿಯೇ ಆಗಿದಲ್ಲಿ ಕರುನಾಡಿನ ತಾಯಿಚಾಮುಂಡೇಶ್ವರಿ ಬೆಟ್ಟ, ಮೈಸೂರಿನ ದಸರಾ, ಯದು ವಂಶದ ಅರಮನೆ, ಶ್ರೀರಂಗ ಪಟ್ಟಣದ ರಂಗನಾಥ, ಈ ರೀತಿ ನಾಡಿನಾದ್ಯಂತ ಇಂದಿಗೂ ವೈಭವವನ್ನ ಉಳಿಸಿಕೊಂಡಿರುವ ಪರಂಪರೆ ಉಳಿಯಲು ಸಾಧ್ಯವಿರಲಿಲ್ಲ. ಯಾಕೆಂದರೆ ಟಿಪ್ಪುವಿನ ಖಡ್ಗಕ್ಕೆಅಷ್ಟೊಂದು ಶಕ್ತಿ ಇತ್ತು. ರಾಜಕೀಯಕ್ಕಾಗಿ, ರಾಜಕೀಯ ಲಾಭಗಳಿಗಾಗಿ ಟಿಪ್ಪುವಿನಂತ ಮಹಾನ್ ವ್ಯಕ್ತಿತ್ವವನ್ನ ಶಕ್ತಿಯನ್ನ ಅವಮಾನಿಸುವ ಕೆಲಸ ಮಾಡಬೇಡಿ. ರಾಜ್ಯದ ಮೂಲೆ ಮೂಲೆಯಲ್ಲಿ ಟಿಪ್ಪುವಿನ ಕುರುಹು ಇದೆ. ರಾಜ್ಯದ ಸಾವಿರಾರು ದೇವಸ್ಥಾನಗಳಲ್ಲಿ ಟಿಪ್ಪುವಿನ ಬಗ್ಗೆ ಉತ್ತಮವಾದ ಸೌಹಾರ್ಧಯುತವಾದ ಪ್ರತೀತಿಗಳು ಇಂದಿಗೂ ಇವೆ. ಉದಾಹರಣೆಗೆ, ನನ್ನ ಊರಾದ ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ನಗರದಲ್ಲಿ ವೀರಭದ್ರಸ್ವಾಮಿ ದೇವಸ್ಥಾನವಿದೆ. ಈ ದೇವಸ್ಥಾನ ಪುರಾತನಕಾಲದ್ದು, ಈ ದೇವಸ್ಥಾನವನ್ನ ಜೀರ್ಣೋದ್ದಾರ ಮಾಡಿರುವುದು ಟಿಪ್ಪುಸುಲ್ತಾನ್ ಎಂಬ ಪ್ರತೀತಿ ಇದೆ.

ಜನ ಎಲ್ಲಿಯವರೆಗೆ ಟಿಪ್ಪುವಿನ ಬಗ್ಗೆ ಅಭಿಮಾನದಿಂದ ಮಾತನಾಡುತ್ತಾರೆ ಎಂದರೆ, ಟಿಪ್ಪುಯಾವುದೇ ಯುದ್ದದ ಸಂರ್ದಭದಲ್ಲಿ ವೀರ ಭದ್ರನೊಂದಿಗೆ ನೇರವಾಗಿ ಮಾತನಾಡಿ ಯುದ್ದಕ್ಕೆ ತೆರಳುತ್ತಿದ್ದ ಎಂದು. ಒಂದೊಮ್ಮೆಟಿಪ್ಪು ಹಿಂದೂ ಸಂಸ್ಕೃತಿಯ ವಿರೋಧಿಯೇ ಆಗಿದಲ್ಲಿ ಈ ರೀತಿಯ ಪ್ರತೀತಿಗಳು ಹುಟ್ಟಿಕೊಳ್ಳಲು ಸಾಧ್ಯವೇ. ಒಬ್ಬ ಅಪ್ರತಿಮ ಶೂರ, ಪರಾಕ್ರಮಿ ರಾಜ, ಶತ್ರುಗಳ ಮೇಲೆ ದಾಳಿ ಗೈಯುವುದು, ಹತ್ಯೆಗೈಯುವುದು ಅಂದಿನ ಕಾಲದಲ್ಲಿ ಸಹಜ ಪ್ರಕ್ರಿಯೆ. ತನಗಾಗಿ ಏನನ್ನೂ ಕಟ್ಟಿಕೊಳ್ಳದೇ ಊರಿನ ರಕ್ಷಣೆಗಾಗಿ, ನಾಡಿನ ರಕ್ಷಣೆಗಾಗಿ, ರಾಜ್ಯದ ಮೂಲೆ ಮೂಲೆಗಳಲ್ಲಿ ಕೋಟೆಗಳನ್ನ ಕಟ್ಟಿರುವ ಟಿಪ್ಪು ಸುಲ್ತಾನ್‍ಒ ಬ್ಬ ಜನಾನುರಾಗಿ ಆಡಳಿತಗಾರ. ಟಿಪ್ಪು ಸುಲ್ತಾನ್‍ತನ್ ನತಂದೆ ಹೈದರಾಲಿಯ ನಂಬಿಕಸ್ತ. ಸೇನಾಧಿಪತಿ ಯುದ್ದ ಸಂದರ್ಭದಲ್ಲಿ ಸೆರೆಯಾಳು ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಂಡ ಎಂಬ ಕಾರಣಕ್ಕೆಆತನಿಗೆ ಮರಣದಂಡನೆ ವಿಧಿಸಿರುವುದನ್ನ ಮರೆತು ಟಿಪ್ಪುವನ್ನೇ ಅತ್ಯಾಚಾರಿ ಎನ್ನುವುದು ಎಷ್ಟು ಸರಿ. ಕನ್ನಡ ನಾಡು ಎಂದೆಂದಿಗೂ ಟಿಪ್ಪುವಿನಂತಹ ಒಬ್ಬ ಮಹಾನ್ ಹೋರಾಟಗಾರನನ್ನು ಆತನ ಮಹಾನ್ ಕೊಡುಗೆಗಳನ್ನು,  ಆತ ನಡೆಸಿರುವ ಅದ್ಭುತ ಆಡಳಿತವನ್ನ ಮಾದರಿಯಾಗಿ ಇಟ್ಟುಕೊಂಡು ಗೌರವಿಸಬೇಕೆ ಹೊರತು ಅವಮಾನಿಸುವುದು, ಅಗೌರವ ತೋರುವುದು ಕನ್ನಡ ನಾಡಿನ ಪರಂಪರೆಗೆ ಅವಮಾನಗೈದಂತೆ.

Leave a Reply

Your email address will not be published.