JDS family politics : ಪುತ್ರ ಪ್ರಜ್ವಲ್ ಸ್ಪರ್ಧೆ ವರಿಷ್ಠರ ನಿರ್ಧಾರವೇ ಅಂತಿಮ : ರೇವಣ್ಣ ..

ಹಾಸನ : ಪುತ್ರ ಪ್ರಜ್ವಲ್ ಚುನಾವಣೆಗೆ ಸ್ಪರ್ಧೆ ಮಾಡುವುದನ್ನ ಹೆಚ್.ಡಿ ದೇವೇಗೌಡರು ಮತ್ತು ಹೆಚ್.ಡಿ ಕುಮಾರಸ್ವಾಮಿ ನಿರ್ಧಾರವೇ ಅಂತಿಮ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಸ್ಪಷ್ಟನೆ ನೀಡಿದರು. ನಮ್ಮ ಕುಟುಂಬದಿಂದ ಹೆಚ್,ಡಿ ಕುಮಾರಸ್ವಾಮಿ ಮತ್ತು ನಾನು ಮಾತ್ರ ಸ್ಪರ್ಧೆ ಅಂದ ಮೇಲೂ ಗೊಂದಲ‌ ಏಕೆ‌ ಎಂದು ರೇವಣ್ಣ ಅವರು ಪ್ರಶ್ನಿಸಿದರು. ಭವಾನಿ ರೇವಣ್ಣ ಅವರು, ಕೆಲ ದಿನಗಳ ಹಿಂದೆ ಪ್ರಜ್ವಲ್ ಸ್ಪರ್ಧೆ ಖಚಿತ. ಇದಕ್ಕೆ ಹೆಚ್.ಡಿ ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದಿದ್ದರು.

ಹಾಸನದಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಪ್ರಜ್ವಲ್ ಗೆ ಟಿಕೆಟ್ ವಿಚಾರಕ್ಕೆ ನಮ್ಮ ಕುಟುಂಬದವರು ಹೊಡೆದಾಡುತ್ತಾರೆ ಎಂದು ಕೊಂಡಿದ್ದರೆ ಅದೆಲ್ಲಾ ಭ್ರಮೆ, ಈ ಬಗ್ಗೆ ಕೆಲವರು ಸುಮ್ಮನೆ ಗೊಂದಲ ಮೂಡಿಸುತ್ತಿದ್ದಾರೆ, ಅವರ ಕುತಂತ್ರ ಎಂದೂ ಫಲಿಸುವುದಿಲ್ಲ ಎಂದು ಹೇಳಿದರು.

ನಾನು ಶಾಸಕನಾಗಲು 18 ವರ್ಷ ಕಾದೆ, ಹಾಗೆಯೇ ಪ್ರಜ್ವಲ್ ಗೂ ರಾಜಕೀಯ ಭವಿಷ್ಯ ಇದೆ, ಅವನು ಈಗ ಜೆಡಿಎಸ್ ಪಕ್ಷದ ಕಾರ್ಯಕರ್ತ, ಪ್ರಜ್ವಲ್ ಸ್ಪರ್ಧೆ ಬಗ್ಗೆ ಕಾಲ ಬಂದಾಗ ನೋಡೋಣ, ತಾತ ಹೇಳಿದಂತೆ ಕೇಳುತ್ತೇನೆ ಅಂತ ಪ್ರಜ್ವಲ್ ಈಗಲೂ ಹೇಳುತ್ತಿದ್ದಾನೆ ಎಂದು ಹೆಚ್.ಡಿ ರೇವಣ್ಣ ತಿಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com