ಮೋದಿಯಂತೆ Lecture ಕೊಡಲು ನನಗೆ ಹಲವು ವರ್ಷಗಳೇ ಬೇಕು : ರಾಹುಲ್ ಗಾಂಧಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿಭಿನ್ನ ರೀತಿಯಲ್ಲಿ ವಿರುದ್ಧ ಹರಿಹಾಯ್ದಿದ್ದಾರೆ. ಮೋದಿಯವರ ಉತ್ತಮ ಭಾಷಣ ಕಲೆಯನ್ನು ರಾಹುಲ್ ಗಾಂಧಿ ಹೊಗಳಿದ್ದಾರೆ. ‘ ನರೇಂದ್ರ ಮೋದಿಯವರಂತೆ ಚೆನ್ನಾಗಿ ಲೆಕ್ಚರ್ ಕೊಡಲು ನನಗೆ ಹಲವು ವರ್ಷಗಳೇ ಬೇಕಾಗಬಹುದು ‘ ಎಂದು ರಾಹುಲ್ ವ್ಯಂಗ್ಯವಾಗಿ ಹೇಳಿದ್ದಾರೆ.

‘ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಮೂಲಭೂತ ವ್ಯತ್ಯಾಸವೊಂದಿದೆ. ಬಿಜೆಪಿಯವರು ಕೇವಲ ಲೆಕ್ಚರ್ ಕೊಡಲು ಬಯಸುತ್ತಾರೆ. ಅವರು ನಿಮ್ಮ ಮಾತನ್ನು ಕೇಳಲು ಬಯಸುವುದಿಲ್ಲ. ಅವರು ಲೌಡ್ ಸ್ಪೀಕರ್ ನಂತೆ ಇದ್ದಾರೆ. ಅವರು ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ನನಗೆ ಅವರಂತೆ ಲೆಕ್ಚರ್ ಕೊಡಲು ಬರುವುದಿಲ್ಲ. ಹಾಗಾಗಲು ಹಲವು ವರ್ಷಗಳೇ ಬೇಕಾಗಬಹುದು ‘ ಎಂದಿದ್ದಾರೆ.

ಬುಧವಾರ ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳ ಸಭೇಯಲ್ಲಿ ಮಾತನಾಡಿದ ರಾಹುಲ್ ‘ ನಾವು ನಿಮ್ಮ ಸಮಸ್ಯೆಗಳನ್ನು ಕೇಳಲು ಸಿದ್ಧರಿದ್ದೇವೆ. ಅರ್ಥ ಮಾಡಿಕೊಳ್ಳುತ್ತೇವೆ. ಪರಿಹಾರದ ಬಗ್ಗೆ ಯೋಚಿಸಿ ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ. ನೀವು ನಿಮ್ಮ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಕೊಡಿ. ನಾನು ಅವುಗಳನ್ನು ಪರಿಶೀಲಿಸುತ್ತೇನೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಖಂಡಿತ ಪರಿಹರಿಸಲು ಪ್ರಯತ್ನಿಸುತ್ತೇನೆ ‘

Leave a Reply

Your email address will not be published.

Social Media Auto Publish Powered By : XYZScripts.com