BSY, ಶೋಭಾ, DVS ರಿಂದಲೇ ಹಿಂದೂ ಕಾರ್ಯಕರ್ತರ ಹತ್ಯೆ : ಶ್ರೀರಾಮುಲು !!!
ಮಂಗಳೂರು : ಬಿಜೆಪಿ ನಾಯಕರು ಹಿಂದೂ ಕಾರ್ಯಕರ್ತರ ಕೊಲೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಸಂಸದ ಶ್ರೀರಾಮುಲು ಯಡವಟ್ಟು ಮಾಡಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಪರಿವರ್ತನಾ ರ್ಯಾಲಿಯ ವೇಳೆ ಮಾತನಾಡಿದ ಶ್ರೀರಾಮುಲು, ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತನ ಹತ್ಯೆಯ ಕುರಿತು ಮಾತನಾಡುವ ಭರದಲ್ಲಿ ಮೊನ್ನೆ ಮೊನ್ನೆ ಶೋಭಾ ಕರಂದ್ಲಾಜೆ, ಬಿ.ಎಸ್ ಯಡಿಯೂರಪ್ಪ, ಸದಾನಂದ ಗೌಡರು ಹಿಂದೂ ಕಾರ್ಯಕರ್ತರ ಹತ್ಯೆ ಮಾಡುವ ಕೆಲಸ ಮಾಡಿದ್ದರು. ಇದನ್ನು ನೀವೆಲ್ಲ ನೋಡಿದ್ದೀರಿ ಎಂದಿದ್ದಾರೆ.
ಕೂಡಲೆ ಎಚ್ಚೆತ್ತುಕೊಂಡ ಶ್ರೀರಾಮುಲು, ಕರ್ನಾಟಕದಲ್ಲಿ ಜಾತಿ ವಿಭಜನೆ ಮಾಡುವ ಹಾಗೂ ಆರ್ಎಸ್ಎಸ್, ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮಾತನ್ನು ತಿರುಗಿಸಿದರು.