ಜರ್ಮನ್‌ನಲ್ಲೊಂದು ಹೃದಯ ವಿದ್ರಾವಕ ಕಥೆ : ವ್ಯಕ್ತಿಯೊಬ್ಬ ಬೋರ್‌ ಆಯ್ತು ಅಂತ ಮಾಡಿದ್ದೇನು…?

ಬರ್ಲಿನ್‌ : ಜರ್ಮನಿಯ ಆಸ್ಪತ್ರೆಯೊಂದರಲ್ಲಿ ನರ್ಸ್‌ ಒಬ್ಬ ಬೋರ್ ಆಯ್ತು ಎಂಬ ಕಾರಣದಿಂದ 106 ಮಂದಿ ರೋಗಿಗಳನ್ನು ಕೊಂದ ಘಟನೆ ಜರ್ಮನಿಯಲ್ಲಿ ನಡೆದಿದೆ.

41 ವರ್ಷದ ನೀಲ್ಸ್‌ ಹೋಗೆಲ್‌ ಎಂಬಾತ 2015ರಲ್ಲಿ 2 ಕೊಲೆ ಹಾಗೂ 4 ಕೊಲೆ ಯತ್ನ ಮಾಡಿದ್ದ. ಜರ್ಮನಿಯ ಬ್ರೆಮನ್‌ ಡೆಲ್ಮೆನ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿನ ರೋಗಿಗಳನ್ನು ಈತ ಹತ್ಯೆ ಮಾಡಿದ್ದ. ಈ ಪ್ರಕರಣದ ವಿಚಾರಣೆ ವೇಳೆ ಇನ್ನೂ ಹೆಚ್ಚಿನ ಮಂದಿ ರೋಗಿಗಳನ್ನು ಕೊಲೆ ಮಾಡಿರುವ ಬಗ್ಗೆ ಸಾಕ್ಷ್ಯಾಧಾರಗಳು ಸಿಕ್ಕಿವೆ. ಅಲ್ಲದೆ ಈತ ಆಗಸ್ಟ್‌ನಲ್ಲಿ ಬೋರ್‌ ಆಯ್ತು ಎಂಬ ಕಾರಣದಿಂದ 90ಕ್ಕೂ ಹೆಚ್ಚು ರೋಗಿಗಳನ್ನು ಕೊಂದಿದ್ದು, ಇದುವರೆಗೂ ಆತ 106 ಮಂದಿಯನ್ನು ಕೊಲೆ ಮಾಡಿರುವುದಾಗಿ ತನಿಖಾಧಿಕಾರಿಗಳು ಹೇಳಿದ್ದಾರೆ.

ಈತ 1999ರಿಂದ 2005ರವರೆಗೆ ಎರಡು ಆಸ್ಪತ್ರಗಳಲ್ಲಿ ಕೆಲಸ ಮಾಡಿದ್ದ. ಅಲ್ಲದೆ ತನಗೆ ಬೋರ್‌ ಆದ ಕೂಡಲೆ ರೋಗಿಗಳನ್ನು ಕೊಲ್ಲುವ ಕೆಲಸ ಮಾಡುತ್ತಿದ್ದು, ಅದಕ್ಕಾಗಿ ಹೃದಯಾಘಾತವಾಗುವ ಅಥವಾ ರಕ್ತ ಚಲನೆಯ ಕುಸಿತ ಉಂಟಾಗುವ ಔಷಧಿಗಳನ್ನು ನೀಡಿ ಕೊಲ್ಲುತ್ತಿದ್ದುದ್ದಾಗಿ ಆತನೇ ಒಪ್ಪಿಕೊಂಡಿದ್ದಾನೆ.

ಈ ರೀತಿ ಔಷಧಿಗಳನ್ನು ನೀಡಿ ಬಳಿಕ ಬದುಕಿಸುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯಾದರೆ ಜೀವ ಉಳಿಸಿದವನೆಂದು ಎಲ್ಲರ ಬಳಿಯೂ ಹೊಗಳಿಸಿಕೊಳ್ಳಬಹುದು ಎಂಬುದು ಈತನ ಆಯೋಚನೆಯಾಗಿತ್ತು ಎಂದು ಆತ ಬಾಯ್ಬಿಟ್ಟಿದ್ದಾನೆ.

ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಇಂಜೆಕ್ಟ್ ಮಾಡುತ್ತಿದ್ದುದನ್ನು ನರ್ಸ್‌ ಒಬ್ಬರು ನೋಡಿದ ನಂತರ ಈತನ ಕೃತ್ಯ ಬೆಳಕಿಗೆ ಬಂದು ಈತನಿಗೆ ಏಳು ವರ್ಷ ಜೈಲು ಶಿಕ್ಷೆಯಾಗಿತ್ತು. ನಂತರ ಮಹಿಳೆಯೊಬ್ಬರು ತನ್ನ ತಾಯಿಯೂ ಈತನ ಕೃತ್ಯಕ್ಕೆ ಬಲಿಯಾಗಿರಬಹುದೆಂದು ಶಂಕಿಸಿ ದೂರು ನೀಡಿದ್ದಳು. ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇನ್ನಷ್ಟು ಸಾಕ್ಷಿಗಳು ಲಭ್ಯವಾಗುತ್ತಿವೆ.

Leave a Reply

Your email address will not be published.

Social Media Auto Publish Powered By : XYZScripts.com