ಸರಿಯಾದ ಪರಿಣಾಮ ಸಾಬೀತಾಗುವವರೆಗೂ ಸಮ-ಬೆಸ ಜಾರಿ ಮಾಡುವಂತಿಲ್ಲ : ಎನ್‌ಜಿಟಿ

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನೇ ದಿನೇ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಮ-ಬೆಸ ನೀತಿಯನ್ನು ಜಾರಿಗೆ ತರಲು ದೆಹಲಿ ಸರ್ಕಾರ ನಿರ್ಧರಿಸಿದೆ. ಆದರೆ ಇದರಿಂದ ಯಾವುದೇ ಪರಿಣಾಮ ಆಗುವುದಿಲ್ಲ. ಆದ್ದರಿಂದ ದೆಹಲಿ ಸರ್ಕಾರ ಈ ನೀತಿಯನ್ನು ಜಾರಿಗೊಳಿಸುವ ಅಗತ್ಯವಿಲ್ಲ ಎಂದು ಶುಕ್ರವಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟ್) ಹೇಳಿದೆ.

ಸಮ-ಬೆಸ ನಿಯಮದ  ಪರಿಣಾಮ ಸಾಬೀತಾಗುವವರೆಗೂ ದೆಹಲಿಯಲ್ಲಿ ಅದನ್ನು ಮತ್ತೆ ಜಾರಿಗೆ ತರಬೇಡಿ ಎಂದು ಸರ್ಕಾರಕ್ಕೆ ಎನ್‌ಜಿಟಿ ಹೇಳಿದೆ. ಜೊತೆಗೆ ಸಮ-ಬೆಸ ನಿಯಮದಿಂದ ದ್ವಿಚಕ್ರ ವಾಹನ ಮತ್ತು ಮಹಿಳೆಯರಿಗೆ ವಿನಾಯಿತಿ ನೀಡುವುದನ್ನು ಪ್ರಶ್ನಿಸಿದೆ. ಕಳೆದ ವರ್ಷ ಸಹ ಸಮ-ಬೆಸ ನಿಯಮ ಜಾರಿಯಾದಾಗ ಮಾಲಿನ್ಯ ಪ್ರಮಾಣ ಕಡಿಮೆಯಾದ ಬಗ್ಗೆ ದೆಹಲಿ ಸರ್ಕಾರ ಯಾವುದೇ ದಾಖಲೆ ನೀಡಿಲ್ಲ ಎಂದು ಎನ್‌ಜಿಟಿ ಹೇಳಿದೆ.

 

ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ನವೆಂಬರ್‌ 13ರಿಂದ ನವೆಂಬರ್‌ 17ರವರೆಗೆ ಮತ್ತೆ ಸಮ-ಬೆಸ ನಿಯಮ ಜಾರಿಗೆ ತರಲು ನಿರ್ಧರಿಸಿತ್ತು.

ಏನಿದು ಸಮ-ಬೆಸ ನಿಯಮ ?

ಸಮ ಸಂಖ್ಯೆಯ ಕಾರುಗಳನ್ನು ಸಮ ದಿನಾಂಕದಲ್ಲಿ ಬೆಸ ಸಂಖ್ಯೆಯ ಕಾರುಗಳನ್ನು ಬೆಸ ದಿನಾಂಕಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗುತ್ತದೆ. ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ 48 ಗಂಟೆಗಳ ಕಾಲ ತೀವ್ರವಾಗಿದ್ದರೆ ಈ ನೀತಿಯನ್ನು ಸರ್ಕಾರ ಜಾರಿಗೆ ತರುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com