ಧೋನಿ ಫಾರ್ಮ್ ಬಗ್ಗೆ ಮಾಜಿ ಆಟಗಾರರ ಟೀಕೆ : ಕೋಚ್ ರವಿ ಶಾಸ್ತ್ರಿ ಹೇಳಿದ್ದೇನು..?

ನ್ಯೂಜಿಲೆಂಡ್ ವಿರುದ್ಧ ರಾಜಕೋಟ್ ನಲ್ಲಿ ನಡೆದ ಎರಡನೇ ಟಿ-20 ಪಂದ್ಯದ ನಂತರ ಧೋನಿ ವಿಪರೀತ ಟೀಕೆ ಎದುರಿಸುತ್ತಿದ್ದಾರೆ. ನಿಧಾನ ಗತಿಯ ಇನ್ನಿಂಗ್ಸ್ ಆಡಿದ ಧೋನಿ 37 ಎಸೆತಗಳನ್ನೆದುರಿಸಿ 49 ರನ್ ಗಳಿಸಿದ್ದರು. ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್, ಆಕಾಶ್ ಚೋಪ್ರಾ ಹಾಗೂ ಅಜಿತ್ ಅಗರ್ಕರ್, ಧೋನಿಯನ್ನು ತಂಡದಿಂದ ಕೈಬಿಡಬೇಕು ಎಂಬರ್ಥದ ಮಾತುಗಳನ್ನಾಡಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ, ಸುನಿಲ್ ಗವಾಸ್ಕರ್ ಹಾಗೂ ವೀರೆಂದ್ರ ಸೆಹ್ವಾಗ್, ಧೋನಿ ಯನ್ನು ಬೆಂಬಲಿಸಿ ಮಾತನಾಡಿದ್ದರು.

ಈಗ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕೂಡ ಈ ವಿಷಯದ ಕುರಿತು ತಮ್ಮ ಮೌನ ಮುರಿದಿದ್ದಾರೆ. ಬೆಂಗಾಲಿ ಭಾಷೆಯ ಆನಂದ ಬಾಜಾರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ರವಿಶಾಸ್ತ್ರಿ ಧೋನಿ ಬಗ್ಗೆ ಹೊಟ್ಟೆಕಿಚ್ಚು ಪಡುವವರು ತುಂಬಾ ಜನರಿದ್ದಾರೆ ಅನಿಸುತ್ತಿದೆ. ಧೋನಿ ಕೆಲವು ಕೆಟ್ಟ ದಿನಗಳನ್ನು ನೋಡಲಿ ಎಂದು ಅವರು ಬಯಸುತ್ತಿದ್ದಾರೆ. ಧೋನಿ ಕ್ರಿಕೆಟ್ ಕರಿಯರ್ ಅಂತ್ಯವಾಗುವುದನ್ನು ನೋಡಲು ಕಾಯುತ್ತಿದ್ದಾರೆ. ಆದರೆ ಧೋನಿಯಂತಹ ಶ್ರೇಷ್ಟ ಆಟಗಾರರು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ ‘ ಎಂದು ಹೇಳಿದ್ದಾರೆ.

‘ ಟೀಕೆಗಳು ನಮ್ಮ ಬದಲಾಯಿಸಲಾರವು. ತಂಡದಲ್ಲಿ ಧೋನಿಯ ಪ್ರಾಮುಖ್ಯತೆ ಏನೆಂಬುದನ್ನು ನಾವು ಅರಿತಿದ್ದೇೆವೆ. ಧೋನಿ ಒಬ್ಬ ಶ್ರೇಷ್ಟ ನಾಯಕರಾಗಿದ್ದು, ತಂಡಕ್ಕಾಗಿ ಆಡುವ ultimate team man ಆಗಿದ್ದಾರೆ. ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಸರಣಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ ‘

‘ ಧೋನಿ ಒಬ್ಬ ಸೂಪರ್ ಸ್ಟಾರ್, ಅದೇ ಕಾರಣಕ್ಕೆ ಅವರು ಟಿವಿಯಲ್ಲಿ ನಡೆಯುವ ಚರ್ಚೆಗಳಲ್ಲಿ ಮುಖ್ಯ ವಿಷಯವಾಗುತ್ತಾರೆ. ಅದ್ಭುತ ಕ್ರಿಕೆಟ್ ಕರಿಯರ್ ಹೊಂದಿರುವ ಧೋನಿಯ ಬಗ್ಗೆ ಬೇರೆ ಆಟಗಾರರಿಂದ ಮಾತನಾಡಿಸಿ ಟಿವಿ ಷೋಗಳನ್ನು ನಡೆಸಲಾಗುತ್ತದೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com