ರಣಜಿ ಟ್ರೋಫಿ : ಮಯಂಕ್ ಅಗರವಾಲ್, ಸ್ಟುವರ್ಟ್ ಬಿನ್ನಿ ಶತಕ : ಕರ್ನಾಟಕದ ಬೃಹತ್ ಮೊತ್ತ

ಹಾಸನ ಜಿಲ್ಲೆಯ ಆಲೂರಿನಲ್ಲಿ ದೆಹಲಿ ಹಾಗೂ ಕರ್ನಾಟಕ ತMಡಗಳ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯುತ್ತಿದೆ. ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ 649 ರನ್ ಗಳ ಬೃಹತ್ ಮೊತ್ತ ಸೇರಿಸಿ ಆಲೌಟ್ ಆಯಿತು.

ಕರ್ನಾಟಕದ ಪರವಾಗಿ ಕಳೆದ ಪಂದ್ಯದಲ್ಲಿ ಅಮೋಘ ತ್ರಿಶತಕ ಗಳಿಸಿ ಮಿಂಚಿದ್ದ ಮಯಂಕ್ ಅಗರವಾಲ್ ಶತಕ ಸಿಡಿಸಿ 176 ರನ್ ಬಾರಿಸಿದರು. ಮಯಂಕ್ ತಮ್ಮ ಇನ್ನಿಂಗ್ಸ್ ನಲ್ಲಿ 24 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಸಿಡಿಸಿದರು. ಸ್ಟುವರ್ಟ್ ಬಿನ್ನಿ 118, ಶ್ರೇಯಸ್ ಗೋಪಾಲ್ 92 ಹಾಗೂ ಮನೀಶ್ ಪಾಂಡೆ 74, ಆರ್ ಸಮರ್ಥ್ 58 ರನ್ ಗಳಿಸಿದರು. ದೆಹಲಿ ಪರವಾಗಿ ವಿಕಾಸ್ ಮಿಶ್ರಾ ಹಾಗೂ ಮನನ್ ಶರ್ಮಾ ತಲಾ 3 ವಿಕೆಟ್ ಪಡೆದರು.

ದೆಹಲಿ ತಂಡ ತನ್ನ ಮೊದಲ ಇನ್ನಿಂಗ್ಸ್ ಅನ್ನು ಆರಂಭಿಸಿದ್ದು ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 20 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸಮನ್ ಗಳಾದ ಉನ್ಮುಕ್ತ್ ಚಂದ್ (8*) ಹಾಗೂ ಗೌತಮ್ ಗಂಭೀರ್ 12 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಕರ್ನಾಟಕಕ್ಕಿಂತ ದೆಹಲಿ ತಂಡ ಇನ್ನೂ 629 ರನ್ ಹಿನ್ನಡೆಯಲ್ಲಿದೆ.

Leave a Reply

Your email address will not be published.

Social Media Auto Publish Powered By : XYZScripts.com