PM ಮೋದಿಗೆ ನನ್ನ ಕಂಡ್ರೆ ಭಯ CM ಸಿದ್ದು ವಿರುದ್ದ ಏಕವಚನದಲ್ಲಿ ಬಿಎಸ್ ವೈ ವಾಗ್ದಾಳಿ..

ದಕ್ಷಿಣ ಕನ್ನಡ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನನ್ನ ಕಂಡರೇ ಭಯ ಎಂದು ಹೇಳುತ್ತಿರುವ ನೀನೋಬ್ಬ ಬಚ್ಚಾ. ಲೂಟಿಕೋರ, ದರೋಡೆಕೋರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ದಕ್ಷಿಣ ಕನ್ನಡದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಧರ್ಮಸ್ಥಳಕ್ಕೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದಾಗ ಉಪವಾಸವಿದ್ದು ಮಂಜುನಾಥನ ದರ್ಶನ ಪಡೆದರು. ಆದರೇ ಸಿಎಂ ಆಗಿರುವ ಈ ಮನುಷ್ಯ ಮೀನು, ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗಿದ್ದಾನೆ. ದೇವರ ದರ್ಶನವನ್ನ ಮಾಡದೇ ಬಾಗಿಲಿನಲ್ಲಿ ನಿಂತು ವಾಪಸ್ ಬಂದಿದ್ದಾನೆ. ಈ ಮೂಲಕ ದೇವಸ್ಥಾನ ಅಪವಿತ್ರಗೊಳಿಸಿದ್ದಾರೆ. ಎಲ್ಲಿಯ ಮೋದಿ, ಎಲ್ಲಿ ಸಿದ್ದರಾಮಯ್ಯ..? ಎಂದು ಪ್ರಶ್ನಿಸಿದರು.

ರಾಜ್ಯದ ಸಿಎಂ ಆಗಿ ರಾಜ್ಯವನ್ನ ಲೂಟಿ ಹೊಡೆಯುತ್ತಿದ್ದಾರೆ. ಸಿಎಂ ಆಗೋಕೆ ಸಿದ್ದರಾಮಯ್ಯ ನಾಲಾಯಕ್ ಎಂದು ಬಿಎಸ್ ವೈ ಕಿಡಿಕಾರಿದರು. ಈ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ PM  ನರೇಂದ್ರ ಮೋದಿ ಅವರಿಗೆ ನನ್ನನ್ನ ಕಂಡರೇ ಭಯ ಎಂದು ಹೇಳಿದನ್ನು ಸ್ಮರಿಸಬಹುದು…

Leave a Reply

Your email address will not be published.

Social Media Auto Publish Powered By : XYZScripts.com