ಸಂವಿಧಾನ ವಿರೋಧಿ ಹೇಳಿಕೆ: ಗೋ, ಮಧುಸೂಧನ್ ವಿರುದ್ಧ ದೇಶದ್ರೋಹ ಆಪಾದನೆಯ ದೂರು …

ಬೆಂಗಳೂರು: ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರ ಗೋ. ಮಧುಸೂಧನ್ ಅವರ ವಿರುದ್ಧ ದೇಶದ್ರೋಹದ ಕೇಸು ದಾಖಲಿಸುವಂತೆ ಚನ್ನರಾಯಪಟ್ಟಣದಲ್ಲಿ ದೂರು ದಾಖಲಿಸಲಾಗಿದೆ.

ಗುರುವಾರ ನಡೆದ ಖಾಸಗಿ ಚಾನೆಲ್ ಒಂದರ ಚರ್ಚೆಯಲ್ಲಿ ಭಾಗವಹಿಸಿದ್ದ ಮಧುಸೂಧನ್ ಅವರು ‌‌”ಭಾರತ ಸಂವಿಧಾನ”ವನ್ನು ಒಪ್ಪುದಿಲ್ಲವೆಂದು ಬಹಿರಂಗ ಹೇಳಿಕೆ ನೀಡಿದ್ದರು.

ಗೊ. ಮಧುಸೂಧನ ಅವರ ಹೇಳಿಕೆಯು ಸಂವಿಧಾನ ಮತ್ತು ದೇಶದ ವಿರುದ್ಧ ಮಾಡಿದ ಟೀಕೆ ಎಂದು ಪರಿಗಣಿಸಬೇಕು. ಹಾಗೆಯೇ ಅವರನ್ನು ದೇಶ ದ್ರೋಹಿ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಂಧಿಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.

ಭಾರತದ ಸಂವಿಧಾನದ ವಿರುದ್ದ ಮಾತನಾಡಿದ ಗೋ, ಮಧುಸೂಧನ್ ವಿರುದ್ಧ ಆರೋಪದ ಮೇಲೆ ದೇಶದ್ರೋಹದ ಕೇಸು ದಾಖಲಿಸಲು ದೂರು ನೀಡಲಾಗಿದೆ.  ಗೋ ಮಧುಸೂಧನ್ ವಿರುದ್ದ ಚನ್ನರಾಯಪಟ್ಟಣದಲ್ಲಿ ಐ‌.ಕೆ. ಮಂಜುನಾಥ್ ಎಂಬುವರು ದೂರು ನೀಡಿದ್ದಾರೆ..‌ ‌

Leave a Reply

Your email address will not be published.

Social Media Auto Publish Powered By : XYZScripts.com