ಧೋನಿಯನ್ನು ಟೀಮ್ ಇಂಡಿಯಾದಿಂದ ಕೈಬಿಡಿ : ಹೀಗೆ ಹೇಳಿದ ಕ್ರಿಕೆಟರ್ ಯಾರು..?

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನಿಧಾನ ಗತಿಯ ಇನ್ನಿಂಗ್ಸ್ ಆಡಿದ ಕಾರಣಕ್ಕಾಗಿ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಟೀಕೆಗಳ ಸುರಿಮಳೆ ಇನ್ನೂ ನಿಂತಿಲ್ಲ. ಟಿ-20 ಯಲ್ಲಿ ಧೋನಿ ತಮ್ಮ ಸ್ಥಾನವನ್ನು ಯುವ ಆಟಗಾರರಿಗೆ ಬಿಟ್ಟುಕೊಡುವ ಸಮಯ ಬಂದಿದೆ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿದ್ದರು. ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಅವರೂ ಸಹ ಇದೇ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು.

ಬಳಿಕ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್, ಡೆಲ್ಲಿ ಡ್ಯಾಶರ್ ವೀರೇಂದ್ರ ಸೆಹ್ವಾಗ್ ಹಾಗು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧೋನಿಯನ್ನು ಬೆಂಬಲಿಸಿ ಮಾತನಾಡಿದ್ದರು. ನ್ಯೂಜಿಲೆಂಡ್ ಸರಣಿಯ ನಂತರ ಶ್ರೀಲಂಕಾ ವಿರುದ್ಧ ಟೆಸ್ಟ್ ಹಾಗೂ ಟಿ-20 ಸರಣಿ ನಡೆಯಲಿದೆ.

Image result for akash chopra

ಭಾರತದ ಮಾಜಿ ಆರಂಭಿಕ ಬ್ಯಾಟ್ಸಮನ್ ಹಾಗೂ ವೀಕ್ಷಕ ವಿವರಣೆಕಾರರಾಗಿರುವ ಆಕಾಶ್ ಚೋಪ್ರಾ ‘ ಎಮ್ ಎಸ್ ಧೋನಿಯವರನ್ನು ಶ್ರೀಲಂಕಾ ವಿರುದ್ಧ ನಡೆಯಲಿರುವ ಮುಂದಿನ ಟಿ-20 ಸರಣಿಯಿಂದ ಕೈ ಬಿಡಬೇಕು. ಬೇರೆ ಆಯ್ಕೆಗಳತ್ತ ಗಮನ ಹರಿಸಬೇಕು ‘ ಎಂದು ಹೇಳಿದ್ದಾರೆ.

‘ ಶ್ರೀಲಂಕಾ ಅಷ್ಟೇನು ಬಲಿಷ್ಠ ತಂಡವಲ್ಲದ ಕಾರಣ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ನೋಡಬಹುದು. ಶ್ರೀಲಂಕಾ ಸರಣಿಯ ನಂತರ ಭಾರತ ಸೌತ್ ಆಫ್ರಿಕಾ ಪ್ರವಾಸ ಕೈಗೊಂಡು ಟಿ-20 ಪಂದ್ಯಗಳನ್ನಾಡಲಿದೆ. ಬಲಿಷ್ಠ ಸೌತ್ ಆಫ್ರಿಕಾ ವಿರುದ್ಧದ ಸರಣಿ ಸವಾಲಿನದ್ದಾಗಿರಲಿದೆ ‘ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com