ಸಿಎಂ ಸಿದ್ದರಾಮಯ್ಯ ವಿರುದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕೆಂಡಾಮಂಡಲ : ಕಾರಣ ?

ಹಾಸನ: ಸಿಎಂ‌ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್ಡಿಡಿ ಕೆಂಡಾ ಮಂಡಲವಾಗಿದ್ದಾರೆ., ಒಂದೂವರೆ ವರ್ಷ ದೇವೇಗೌಡರು ರಾಜ್ಯದ ವಿಕಾಸ ಮಾಡಿಲ್ಲವೇ ಎಂದು ವಿಕಾಸಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮಾತಿನಲ್ಲಿ ಹಿಡಿತ ಇರಲಿ ಎಂದು ಎಚ್ಚರಿಕೆ ನೀಡಿದ್ದಾರೆ.

ಹಾಸನದಲ್ಲಿ ಇಂದು ಮಾತನಾಡಿದ ಹೆಚ್.ಡಿ ದೇವೇಗೌಡರು, ‘ ನಾನು ಒಂದೂವರೆ ವರ್ಷ ಏನು ಮಾಡಿದೆ ಎಂದು‌ ನೆನಪಿಸಿಕೊಳ್ಳಲಿ, ಬೆಂಗಳೂರು ಐಟಿ‌ ಹಾರ್ಡ್ವೇರ್, ಕೈಗಾರಿಕೆಗೆ, ಶಕ್ತಿ ತುಂಬಿದ್ದು ಯಾರು? ಹೀಗೆ ಮಾತನಾಡಲು‌ ನಾಚಿಕೆ ಆಗುವುದಿಲ್ಲವೇ? ನನ್ನ ಕೆಣಕೋದು ಬೇಡ, ನಾನು ಯಾರ ಬಗ್ಗೆಯೂ ಈವರೆಗೂ ಅಗೌರವವಾಗಿ ಮಾತನಾಡಿಲ್ಲ, ನಾನು‌ ಫೌಂಡೇಷನ್ ಹಾಕಿದ ಕೃಷ್ಣಾಯೋಜನೆ ಬಳಕೆ ಮಾಡಲಾಗಿಲ್ಲ . ಇಂಥವರು ವಿಕಾಸದ ಬಗ್ಗೆ ವ್ಯಂಗ್ಯ ಮಾಡುತ್ತೀರಾ?’ ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಹೋದ ಕಡೆ ಹಣ ಕೊಟ್ಟು ಜನ‌ ಕರೆದುಕೊಂಡು ಬಂದಿದ್ದಾರಾ? ಎಂದು ಪ್ರಶ್ನಿಸಿದ ಹೆಚ್.ಡಿಡಿ, ಇದು ಅಹಿಂದ ರಾಜಕೀಯ ಅಲ್ಲ, ಅಂಥ ಒಂದು ಕಾರ್ಯಕ್ರಮ ನೀವು ಮಾಡಿ? ಈಗ ಕುಮಾರಸ್ವಾಮಿ ಶಕ್ತಿ ಗೊತ್ತಾಯಿತೇ? ಕುಮಾರಸ್ವಾಮಿ ಒಬ್ಬ ರೈತನ ಮಗ, ನಿಮ್ಮ ಹಣ, ನಿಮ್ಮ‌ ಧಿಮಾಕಿಗೆ ಮುಂದಿನ ಭಾರಿ ಜನ ಉತ್ತರ ನೀಡಲಿದ್ದಾರೆ, ಸಿಎಂ‌ ವ್ಯಂಗ್ಯ ಮಾತು ನನಗೆ ಹೇಸಿಗೆ ತರಿಸಿದೆ, ನಿಮಗೆ ತಡೆದುಕೊಳ್ಳಲು ಆಗದಿದ್ದರೆ ಸುಮ್ಮನಿದ್ದು ಬಿಡಿ, ನಾನು ‌ಇಡೀ‌ ರಾಜ್ಯ ಸುತ್ತಿದ್ದೇನೆ, ನನ್ನ ಹೆಸರು ಹೇಳಿ ಯಾವುದೇ ಬಿರುದು ಕೊಡೋದು ಬೇಡ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಜೆಡಿಎಸ್ ಹಾಲಿ ಶಾಸಕರೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ. ಯಾವುದೇ ಬದಲಾವಣೆ ಇಲ್ಲ…

ನಮ್ಮ ಕುಟುಂಬ ದಿಂದ ಎಷ್ಟು ಜನ‌ ಚುನಾವಣೆಗೆ ನಿಲ್ಲುತ್ತಾರೆ ಎಂಬುದು ದೊಡ್ಡ ವಿಷಯ ಅಲ್ಲ, ಈ ಬಗ್ಗೆ ಮುಂದಿನ ದಿನಗಳಲ್ಲಿ ನಾನೇ ತೀರ್ಮಾನ ಮಾಡುತ್ತೇನೆ. ಜೆಡಿಎಸ್ ಹಾಲಿ ಶಾಸಕರೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ, ಯಾವುದೇ ಬದಲಾವಣೆ ಇಲ್ಲ. ಎಂದು ಸ್ಪಷ್ಟನೆ ನೀಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಟಿಪ್ಪು ಜಯಂತಿಯನ್ನು ನಾಳೆ ನಮ್ಮ ಪಕ್ಷದ ಕಚೇರಿಯಲ್ಲಿ ಆಚರಿಸುತ್ತೇವೆ, ದೇಶದ ಎಲ್ಲಾ ನಾಯಕರ ಜಯಂತಿ ಇವರು ಮಾಡಲಿ, ಬೇಡ ಅನ್ನೋರು ಯಾರು? ಎಂದರು.

Leave a Reply

Your email address will not be published.

Social Media Auto Publish Powered By : XYZScripts.com