ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ವಾಟಾಳ್ ನಾಗರಾಜ್ ಆಕ್ರೋಶ ಪ್ರತಿಭಟನೆ…

ಮೈಸೂರು : ಕರ್ನಾಟಕ ಲೋಕಸಭಾ ಸದಸ್ಯರಿಗರ ರಾಜ್ಯದ ಬಗ್ಗೆ ಕಾಳಜಿ ಇಲ್ಲಾ. ಇವರು ಎಲ್ಲಿ ಇದ್ದಾರೆ ಅಂತಾ ಗೊತ್ತಿಲ್ಲಾ. ನರೇಂದ್ರ ಮೋದಿ ತಮಿಳಿನಾಡಿಗೆ ಎದ್ದು ಬಿದು ಓಡುತ್ತಿದ್ದಾರೆ. ರಾಜ್ಯದ ಮೇಕು ದಾಟು ಯೋಜನೆ ಬಗ್ಗೆ ಪ್ರಾಮಾಣಿಕ ಪ್ರಯತ್ನ ಆಗಲಿಲ್ಲ.ಮಹಾಜನ್  ವರದಿ ಜಾರಿಗೆ ಬರಲಿಲ್ಲ ಎಂದು ಆರೋಪಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

ಮೈಸೂರಿನ ರೈಲ್ವೆ ನಿಲ್ದಾಣದ ಅವರಣದಲ್ಲಿ ಚಾಪೆ ಮೇಲೆ ಮಲಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಹಳದಿ ಕೆಂಪು ಬಣ್ಣ ಏನಿದೆ ಇದು ರಾಜ್ಯದ ಆರು ಕೋಟಿ ಕನ್ನಡಿಗರ ಪ್ರತೀಕ.ಈ ಬಾವುಟವನ್ನೆ ಒಪ್ಪಬೇಕಿತ್ತು. ಆದ್ರೆ ಬಾವುಟ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಬದಲಾವಣೆ ಆದ್ರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ವಾಟಾಳ್ ಎಚ್ಚರಿಕೆ ನೀಡಿದರು.

ಇನ್ನ ಮೈಸೂರಿನಲ್ಲಿ ನಡೆಯಲಿರು ಅಖಿಲ ಭಾರತ ಸಾಹಿತ್ಯ ಸಮ್ಮೆಳಕ್ಕೆ ಸಿದ್ದತೆ ಸಾಲದು. ಇಡಿ ವರ್ಷದಲ್ಲಿ ಒಂದು ತಿಂಗಳು ಮಾತ್ರ ಸಾಹಿತ್ಯ ಪರಿಷತ್ ನವರು ಸಂಭ್ರಮ ಮಾಡ್ತಾರೆ. ಇನ್ನುಳಿದ ಹನ್ನೊಂದು ತಿಂಗಳು ನಿದ್ರೆ ಮಾಡ್ತಾರೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.

ಟಿಪ್ಪು ಸುಲ್ತಾನ್ ಈ ದೇಶದ ಮಹಾನ್ ವೀರಾ. ಬೆಂಗಳೂರಿನ ದೇವನಹಳ್ಳಿ ಹುಡುಗ. ದೆಹಲಿಯ ಪಾರ್ಲಿಮೆಂಟ್ ಭವನದ ಬಳಿ ಟಿಪ್ಪು ಸುಲ್ತಾನ್ ಪ್ರತಿಮೆ ಅನಾವರಣ ಮಾಡಬೇಕು. ಆತನ ಹುಟ್ಟು ಹಬ್ಬ ಆಚರಿಸುವಂತೆ ಸರ್ಕಾರಕ್ಕೆ ನಾನೆ ಸಲಹೇ ನೀಡಿದ್ದೆ, ಹುಟ್ಟು ಹಬ್ಬ ಆಚರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಅವರು ಅಭಿನಂದನೆಗಳನ್ನು ಸಲ್ಲಿಸಿದರು…

Leave a Reply

Your email address will not be published.

Social Media Auto Publish Powered By : XYZScripts.com