JDS ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡುತ್ತೇನೆ : ಎಚ್ ಡಿಕೆ

ಶಿವಮೊಗ್ಗದಲ್ಲಿ ವಿಕಾಸ ಯಾತ್ರೆ ಮತ್ತು ರೈತರ ಕಣ್ಣಿರು ಪಾದಯಾತ್ರೆಯ ಸಮಾರಂಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ‘ ಶಿವಮೊಗ್ಗ ಜಿಲ್ಲೆ ಕೈಗಾರಿಕೆಯ ಎರಡು ಕಣ್ಣುಗಳು ಭದ್ರಾವತಿಯ VISL ಮತ್ತು MPM ಕಾರ್ಖಾನೆಗಳನ್ನು ನಾವು ಅಧಿಕಾರಕ್ಕೆ ಬಂದ ಪುನಶ್ಚೇತನಕ್ಕೆ ಯತ್ನ ಮಾಡಲಾಗುವುದು. ಆಪರೇಷನ್ ನಂತರ ವೈದ್ಯರು ಒಂದು ತಿಂಗಳು ವಿಶ್ರಾಂತಿಯಲ್ಲಿ ಇರಬೇಕು ಅಂತ ಹೇಳಿದ್ರು, ಆದರೆ ಸ್ವಯಂ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಅಂತ ಹೇಳಿ ಯಾತ್ರೆ ಕೈಗೊಂಡು ಜನರ ಮುಂದೆ ಬಂದಿದ್ದೇನೆ ‘

‘ ಇದು ನನ್ನ ಜೀವನದ ಎರಡನೇ ಯಾತ್ರೆ. ನನಗೆ ಹಣ ಮಾಡುವ ಗುರಿ ಇಲ್ಲ. ಜನರ ಸಂಕಷ್ಟಕ್ಕೆ ಸ್ಪಂದಿಸಲು ಬಂದಿದ್ದೇನೆ. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ 24 ಗಂಟೆಯಲ್ಲಿ ರೈತರ ಎಲ್ಲಾ ಬ್ಯಾಂಕ್ ಗಳ ಸಾಲಮನ್ನಾ ಮಾಡುತ್ತೇನೆ. ಪ್ರದಾನಿ ನರೇಂದ್ರ ಮೋದಿ ಜಿಎಸ್ ಟಿ ಜಾರಿಗೆ ತಂದು ಜನರ ಮೇಲೆ ತೆರಿಗೆ ಹೊರೆಯನ್ನು ಹಾಕುತ್ತಿದ್ದಾರೆ. ರೈತರ ಸಾಲಮನ್ನಾ ಮಾಡಿ ಎಂದ್ರೆ ಆಗಲ್ಲ ಸರ್ಕಾರ ದಿವಾಳಿಯಾಗುತ್ತದೆ ಎಂದು ಭಾಷಣ ಮಾಡುತ್ತಾರೆ ಎಂದು ಟೀಕಿಸಿದರು.

ರೈತರು ಸಾಲಗಾರರಾಗ ಬಾರದು ಎಂದು ಹೇಳಿ ನನ್ನ ಸ್ವಂತ ಖರ್ಚಿನಲ್ಲಿ  ಇಸ್ರೈಲ್ ನ ಕೃಷಿ ತಿಳಿಯಲು ಪ್ರವಾಸ ಮಾಡಿಕೊಂಡು ಬಂದಿದ್ದೇನೆ. ನಾವು ಅಧಿಕಾರಕ್ಕೆ ಬಂದರೆ, ಪ್ರತಿವರ್ಷದ ಕೃಷಿ ಚಟುವಟಿಕೆ ಸರ್ಕಾರವೇ ಹಣ ಭರಿಸುವ ಯೋಜನೆ ಜಾರಿ ಮಾಡುತ್ತೆನೆ.

Leave a Reply

Your email address will not be published.

Social Media Auto Publish Powered By : XYZScripts.com