Election : ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ: ಶೆ 75ರಷ್ಟು ಮತದಾನ …

ಗುರುವಾರ ನಡೆದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೇ. 75ರಷ್ಟು ಜನ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಹಿಮಾಚಲ ಪ್ರದೇಶ ರಾಜ್ಯದ 12 ಜಿಲ್ಲೆಗಳ 68 ವಿಧಾನ ಸಛಾ ಕ್ಷೇತ್ರಗಳಿಗಾಗಿ ನಡೆದ ಮತದಾನದಲ್ಲಿ ದಾಖಲೆ ಪ್ರಮಾಣದಲ್ಲಿ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿದರು. ಹಾಲಿ ಮುಖ್ಯಮಂತ್ರಿ ವೀರಭದ್ರಸಿಂಗ್  ಮತ್ತು ಮಾಜಿ ಮುಖ್ಯಮಂತ್ರಿ ಪ್ರೇಮಕುಮಾರ್ ಧುಮಾಲ್ ಸೇರಿದಂತೆ 337 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತ ಪೆಟ್ಟಿಗೆ ಸೇರಿವೆ.

ಕಳೆದ ಬಾರಿ 2012ರಲ್ಲಿ ವಿಧಾನಸಛಾ ಚುನಾವಣೆಯಲ್ಲಿ ಶೇ. 73.51ರಷ್ಟು ಮತದಾನ ನಡೆದಿತ್ತು. ಗುರುವಾರದ ಮತದಾನದಲ್ಲಿ ಹಿಂದಿನ ದಾಖಲೆಯನ್ನೂ ಮೀರುವ ಪ್ರಮಾಣದಲ್ಲಿ ಮತಗಳ ಚಲಾವಣೆಯಾಗಿದೆ.

ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆಯೇ ಜನ ಮತಗಟ್ಟೆಗಳಿಗೆ ತೆರಳಲು ಆರಂಭಿಸಿದರು. 2300 ಮತಗಟ್ಟೆಗಳಲ್ಲಿ  ಮತದಾನ ಸುಗಮವಾಗಿ ನಡೆಯುವ ಉದ್ದೇಶದಿಂದ 37,000 ಚುನಾವಣಾ ಸಿಬ್ಬಂದಿ ಹಾಗೂ 17,770 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಚುನಾವಣಾ ಆಯೋಗವು ಮೊದಲ ಬಾರಿಗೆ ಮತದಾರರು ತಾವು ಚಲಾಯಿಸಿದ ಮತದ ಬಗ್ಗೆ ಖಚಿತ ಪಡಿಸಿಕೊಳ್ಳು  ವಿವಿಪಿಎಟಿ (ವೋಟರ್ ವೆರಿಫೈಯೇಬಲ್ ಪೇಪರ್ ಆಡಿಟ್ ಟ್ರೇಲ್) ಪದ್ಧತಿಯನ್ನು ಅಳವಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Leave a Reply

Your email address will not be published.

Social Media Auto Publish Powered By : XYZScripts.com