BJP ಯವರು ಮಹಾನ ಡೋಂಗಿಗಳು: ಎರಡು ನಾಲಿಗೆ ಮನುಷ್ಯರು – CM ಸಿದ್ದರಾಮಯ್ಯ ವಾಗ್ದಾಳಿ..

ಬೆಂಗಳೂರು : ಟಿಪ್ಪು ಜಯಂತಿ ಆಚರಣೆ ವಿರೋಧಿಸುತ್ತಿರುವ ಬಿಜೆಪಿಯವರು ಡೋಂಗಿಗಳು ಅವರಿಗೆ ಎರಡು ನಾಲಿಗೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಆರಂಭಕ್ಕೂ ಮುನ್ನ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಧಿಕಾರದಲ್ಲಿದ್ದಾಗ ಒಂದು ರೀತಿ. ಇಲ್ಲದಿರುವಾಗ ಇನ್ನೊಂದು ರೀತಿ ಮಾತನಾಡುತ್ತಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಟಿಪ್ಪು ವೇಷಧರಿಸಿ ಪೇಟ ತೊಟ್ಟಿ ಸಂಭ್ರಮಿಸಿದ್ದರು. ಆದರೆ ಈಗ ಟಿಪ್ಪು ಜಯಂತಿ ಆಚರಣೆಗೆ ವಿರೋಧವೇಕೆ ಎಂದು ಪ್ರಶ್ನಿಸಿದರು.

ಬಿಜೆಪಿಯವರಂತೆ ಯಾತ್ರೆಗೀತ್ರೆ ಮಾಡೋದಿಲ್ಲ. ನಮ್ಮದು ಸಾಧನಾ ಪರ್ವ, ನಾವು ಮಾಡಿದ ಸಾಧನೆಯನ್ನ ಜನರ ಮುಂದೆ ಇಡುತ್ತೇವೆ. ಪರಿವತ೯ನೆ, ಕುಮಾರಪರ್ವ ಎಂದು ಹೇಳೋ ವಿರೋಧ ಪಕ್ಷಗಳು  ಅಧಿಕಾರದಲ್ಲಿದ್ದಾಗಲೇ ಏನು ಮಾಡಲಾಗಲಿಲ್ಲ.

ಯುಕೆಪಿ ಹಣ ಬಿಡುಗಡೆ ವಿಚಾರವಾಗಿ ಮಾತನಾಡಿ ‘ ಬಿಜೆಪಿಯವರ ಮುತ್ತಿಗೆಗೆ ಹೆದರೋ ವ್ಯಕ್ತಿಗಳ ನಾವಲ್ಲ. ಇಲ್ಲಿ ಉತ್ತರನ ಪೌರುಷ ಬಿಟ್ಟು, ಪಾಲಿ೯ಮೆಂಟ್ ಗೆ ಮುತ್ತಿಗೆ ಹಾಕಿ ರೈತರ ಸಾಲಮನ್ನಾ ಮಾಡಿಸಲಿ.

ಜೆಡಿಎಸ್ ಪಕ್ಷ ಏನೆಲ್ಲಾ ಕೊಟ್ಟರೂ ಸಿದ್ದರಾಮಯ್ಯ ಪಕ್ಷ ಬಿಟ್ಟರೂ ಅನ್ನೋ  ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿದ ಸಿಎಂ ‘ ನಾನು ಪಕ್ಷ ಬಿಡಲಿಲ್ಲ, ನನ್ನನ್ನೇ ಜೆಡಿಎಸ್ ನಿಂದ ಹೊರ ಹಾಕಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಜನ್ರಿಗೆ ಸುಳ್ಳು ಹೇಳುತ್ತಿದ್ದಾರೆ.

ಕಾಂಗ್ರೆಸ್ ನವರನ್ನ ಬಿಜೆಪಿ ಸೆಳೆಯೋ ಯತ್ನ ವಿಚಾರವಾಗಿ ಮಾತನಾಡಿ ‘ ಕಾಂಗ್ರೆಸ್ ಸಚಿವರು ಯಾವಾಗಲೂ ಕಾಂಗ್ರೆಸ್ಸ ನಲ್ಲೆ ಇತಾ೯ರೆ,  ಅವರನ್ನ ಸೆಳೆಯಲು ಯಾರಿಗೂ ಸಾಧ್ಯವಿಲ್ಲ ‘ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com