BMTC : ಬಸ್ ಸೇವೆಯಲ್ಲಿ ಮರು ವೇಳಾ ಪಟ್ಟಿ ಜಾರಿಗೆ ಚಿಂತನೆ : MD

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬಸ್ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಬಿಎಂಟಿಸಿ (ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೊರೇಶನ್) ಬಸ್ ಸೇವೆಗಳ ಮರು ವೇಳಾಪಟ್ಟಿಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ವಿಶೇಷವಾಗಿ ನಗರದ ಪೂರ್ವಭಾಗಗಳಾದ ಎಲೆಕ್ಟ್ರಾನಿಕ್ ಸಿಟಿ ವಿಭಾಗದಲ್ಲಿ ಈ ಯೋಜನೆ ಶೀಘ್ರವೇ ಜಾರಿಗೆ ಬರುವ ಸಾಧ್ಯತೆಯಿದೆ.

ಈ ಉದ್ದೇಶಗಳಿಗಾಗಿ ಬಿಎಂಟಿಸಿ ಜಿಪಿಎಸ್ ಟ್ರ್ಯಾಕಿಂಗ್ ಬಸ್ ಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ಓಲ್ಡ್ ಮದ್ರಾಸ್ ರೋಡ್, ವೈಟ್ ಫೀಲ್ಡ್, ಮಾರತ್ ಹಳ್ಳಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ ಮತ್ತು ಇತರ ಪ್ರದೇಶಗಳಿಗೆ ಬಸ್ ಸೇವೆಗಳು ಮರು ವೇಲಾಪಟ್ಟಿ ನಿಗದಿಮಾಡುವ ಕುರಿತು ನಿರ್ಧರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಎಂಟಿಸಿ ಎಂಡಿ ಪೊನ್ನುರಾಜ್ ಅವರು, ನಗರದ ಪೂರ್ವ ಭಾಗಗಳಿಗೆ ಬಿಎಂ ಟಿಸಿ ಬಸ್ ಸೇವೆಗಳ ಮರು ವೇಳಾಪಟ್ಟಿ ಸಿದ್ಧಪಡಿಸಲು ಚಿಂತನೆ ನಡೆಸಲಾಗಿದೆ. ಉದಾಹರಣೆಗೆ ಪ್ರಸ್ತುತ ಇರುವ ವೇಳಾಪಟ್ಟಿ ಪ್ರಕಾರ ಮೆಜೆಸ್ಟಿಕ್ ನಿಂದ ಕಾಡುಗೋಡಿವರೆಗೆ (27 ಕಿ.ಮೀ) ತಲುಪಲು ಒಂದು ಗಂಟೆ ಅವಧಿ ಬೇಕಾಗುತ್ತದೆ. ಕೆಲವೊಮ್ಮೆ ಇದಕ್ಕಿಂತ ಹೆಚ್ಚಿನ ಸಮಯಬೇಕಾಗುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯುಂಟಾಗುತ್ತಿದೆ. ಇದರಿಂದಾಗಿ ಮರು ವೇಳಾಪಟ್ಟಿ ಪ್ರಕಟಿಸುವುದರಿಂದ ಬಸ್ ಸೇವೆಯಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com