ಬಾಲಿವುಡ್ ನಟಿ ಕಾಜೋಲ್ FIRST LOVE ಯಾರು..? ಖಂಡಿತ ಅಜಯ್ ದೇವಗನ್ ಅಲ್ಲ..!

ಬಾಲಿವುಡ್ ನ ಖ್ಯಾತ ನಟಿ ಕಾಜೋಲ್ ಅವರ ಫರ್ಸ್ಟ್ ಲವ್ ಯಾರು ಗೊತ್ತಾ..? ಏನು..? ಪತಿ ಅಜಯ್ ದೇವಗನ್ ಅಂದ್ರಾ.. ಊಹೂಂ ಖಂಡಿತ ಅಲ್ಲ.. ಹಾಗಾದ್ರೆ ಕಾಜೋಲ್ ಫರ್ಸ್ಟ್ ಲವ್, ಬೇರೆ ಯಾರಾದ್ರೂ ನಟ ಅಥವಾ ಹಳೆಯ ಬಾಯಫ್ರೆಂಡ್ ಇರಬಹದು ಅನ್ಕೊಂಡ್ರಾ.. ಅದೂ ಅಲ್ಲ.

ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಕಾಜೋಲ್ ತಮ್ಮ ಹಳೆಯ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ. ‘ ಇದು ನಾನು ಖರೀದಿಸಿಸಿದ ಮೊದಲ ಕಾರ್, ಇದೇ ನನ್ನ ಫರ್ಸ್ಟ್ ಲವ್ ‘ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಕಾಜೋಲ್ ತಮ್ಮ ಮಾರುತಿ ಕಾರಿನ ಬಾನೆಟ್ ಮೇಲೆ ಕುಳಿತು ಪೋಸ್ ನೀಡಿದ್ದಾರೆ.

ದಶಕಗಳವರೆಗೆ ಬಾಲಿವುಡ್ ನಲ್ಲಿ ಮಿಂಚಿದ ಕಾಜೋಲ್, ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಬಾಜಿಗರ್, ಕುಚ್ ಕುಚ್ ಹೋತಾ ಹೈ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿನ ಸಾಧನೆಗಾಗಿ 2011 ರಲ್ಲಿ ಕಾಜೋಲ್, ಭಾರತದ ನಾಲ್ಕನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. 5 ಬಾರಿ ಫಿಲ್ಮ ಫೇರ್, 5 ಸಲ ಬೆಸ್ಟ್ ಆ್ಯಕ್ಟ್ರೆಸ್ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com