Bollywood shocking : ನಿನಗೆ ನಟಿಸೋಕೆ ಬರಲ್ಲ, ರಾತ್ರಿ ರೂಂಗೆ ಬಾ ಅಂದಿದ್ನಂತೆ ಆ ನಿರ್ದೇಶಕ.!

ಚಿತ್ರರಂಗದಲ್ಲಿರೋ ಲೈಂಗಿಕ ದೌರ್ಜನ್ಯದ ಕುರಿತು ಇತ್ತೀಚೆಗೆ ಸಾಕಷ್ಟು ನಟಿಯರು ಧೈರ್ಯವಾಗಿ ಮಾತನಾಡುತ್ತಿದ್ದಾರೆ. ಅವಕಾಶಗಳಿಗಾಗಿ ಬೆಡ್ ರೂಂಗೆ ಕರೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ತಮಗಾದ ಕಹಿ  ಅನುಭವವನ್ನ ಹಂಚುಕೊಳ್ತಿದ್ದಾರೆ.
ಹಾಲಿವುಡ್ ನಿರ್ಮಾಪಕ ಹಾರ್ವೆ ವೆಯಿನ್ಸ್ ಟನ್ ಸಂಗತಿ ಬಯಲಾದ ಮೇಲೆ ಇಂತಹ ವ್ಯಕ್ತಿಗಳಿಂದ ತಾವು ಎದುರಿಸಿದ ಹಿಂಸೆಯನ್ನ ನಟೀಮಣಿಯರು ತುಟಿ ಬಿಚ್ಚಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಾವು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಸಿನಿಮಾ ನಿರ್ದೇಶಕನೊಬ್ಬನಿಂದ ಅನುಭವಿಸಿದ ಲೈಂಗಿಕ ದೌರ್ಜನ್ಯವನ್ನ ನೆನಪಿಸಿಕೊಂಡಿದ್ದಾರೆ. ಆದ್ರೆ ಆತನ ಹೆಸರನ್ನ ಮಾತ್ರ ಆಕೆ ಬಯಲು ಮಾಡಿಲ್ಲ.
ನನ್ನ ಸಿನಿಕರಿಯರ್ನ ಆರಂಭದಲ್ಲಿ 56ದಿನಗಳ ಕಾಲ ಔಟ್ ಡೋರ್ ಶೂಟಿಂಗ್ ಹೋಗಿದ್ವಿ. ಆ ಸಮಯದಲ್ಲಿ ಆ ಚಿತ್ರ ನಿರ್ದೇಶಕ ನನಗೆ ಕಿರುಕುಳ‌ ಕೊಟ್ಟ, ಇಡೀ ದಿನ ನಿನಗೆ ನಟನೆ ಬರಲ್ಲ ಅಂತ ಬೈಯುತ್ತಿದ್ದ ಆತ ರಾತ್ರಿಯಾದ್ರೆ ತನ್ನ ಕೋಣೆಗೆ ಕರೀತಿದ್ದ ಅಂತ ಸ್ವರಾ ವಿವರಿಸಿದ್ದಾರೆ.
ಸೀನ್ ವಿಚಾರವಾಗಿ ಮಾತನಾಡಬೇಕು ಅಂತ ಹೇಳಿ ಮದ್ಯಪಾನ ಮಾಡಿ ಬರ್ತಿದ್ದ. ನನ್ನೊಂದಿಗೆ ಲವ್, ಸೆಕ್ಸ್ ಬಗ್ಗೆ ಮಾತಾಡುತ್ತಿದ್ದ, ನಿನ್ನನ್ನ  ಅಪ್ಪಿಕೊಳ್ಳಾ ಅಂತ ಕೇಳ್ತಿದ್ದ, ನನಗೆ ಆ ಸಮಯದಲ್ಲಿ ತುಂಬಾ ಭಯವಾಗ್ತಿತ್ತು ಅಂತ ಸ್ವರಾ ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮಹಿಳೆಯರು ಧೈರ್ಯವಾಗಿರಬೇಕು. ಯಾವುದಕ್ಕೂ ಜಗ್ಗಬಾರದು, ಇಂತಹ ಸಂದರ್ಭಗಳನ್ನ ಮಹಿಳೆಯರು ಧೈರ್ಯವಾಗಿ ಎದುರಿಸಬೇಕು ಅಂತ ಸ್ವರಾ ಇದೇ ವೇಳೆ ತಿಳಿಸಿದ್ದಾರೆ. ಸದ್ಯ ಈ ಬಾಲಿವುಡ ಬ್ಯೂಟಿ ವೀರೆ ವಿಡ್ಡಿಂಗ್ ಚಿತ್ರದಲ್ಲಿ ನಟಿಸ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com