ಮೋದಿಜೀ…ನೀವು ದೇಶದ ಆರ್ಥಿಕತೆಯನ್ನೇ ಕೊಂದಿದ್ದೀರಿ…. : ಜಿ ಪರಮೇಶ್ವರ್‌

ಬೆಂಗಳೂರು : ನೋಟ್ ಬ್ಯಾನ್ ನಿಂದ ಜನ ಸಾಯ್ತಿದ್ದಾರೆ. 50 ದಿನ ಸಹಿಸಿಕೊಳ್ಳಿ. ಇಲ್ಲವಾದರೆ ಪಬ್ಲಿಕ್‌ನಲ್ಲಿ ನನ್ನನ್ನು ನೇಣಿಗೆ ಹಾಕಿ ಎಂದು ಮೋದಿ ಹೇಳಿದ್ದರು. ಈಗ 365 ದಿನವಾಗಿದೆ. ಈಗ ಏನು ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ  ಜಿ ಪರಮೇಶ್ವರ್‌ ಪ್ರಶ್ನಿಸಿದ್ದಾರೆ.

ನೀವೇ ಹೇಳಿದ್ದಿರಿ, ಅದಕ್ಕೆ ಜನ ಕೇಳುತ್ತಿದ್ದಾರೆ. ಏನು ಮಾಡೋಣ ಎಂದು ನೀವೇ ಹೇಳಿ. ನೋಟ್ ಬ್ಯಾನ್ ನಿಂದ 2 ಕೋಟಿ 40 ಲಕ್ಷ ಕಂಪನಿಗಳು ಮುಚ್ಚಿವೆ. ಈ ವರದಿಯನ್ನು ನಿನ್ನೆ ಕೇಂದ್ರ ಸರ್ಕಾರವೇ ಪ್ರಕಟಿಸಿದೆ. ಜಿಡಿಪಿ 7.5 ಇದ್ದದ್ದು 5.7ಕ್ಕೆ ಕುಸಿದಿದೆ. ಅಭಿವೃದ್ದಿಗೆ ಇಂದು ಹಣ ಸಾಕಾಗುತ್ತಿಲ್ಲ. ಸಣ್ಣ ವ್ಯಾಪಾರಿಗಳು ಕುಸಿದುಹೋಗಿದ್ದಾರೆ. ದೇಶದ ಆರ್ಥಿರ ವ್ಯವಸ್ಥೆಯನ್ನೇ ನೀವು ಕೊಂದಿದ್ದೀರ ಎಂದು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಮಾಡಿದಷ್ಟು ಕೆಲಸವನ್ನು ದೇಶದಲ್ಲಿ ಯಾವ ರಾಜ್ಯದಲ್ಲೂ ಮಾಡಿಲ್ಲ. ಆದರೆ ಕುಮಾರಸ್ವಾಮಿಯವರು ಯಡಿಯೂರಪ್ಪ ನಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ನಿಮಗೆ ಹೊಟ್ಟೆ ಬಂದಿದೆ. ಅದಕ್ಕೇ ಹೀಗೆ ಮಾತನಾಡುತ್ತಿದ್ದೀರಿ. ಸಿದ್ದರಾಮಯ್ಯ ನಾಲ್ಕು ವರ್ಷ ಮಲಗಿದ್ದರು. ಈಗ ಎದ್ದಿದ್ದಾರೆ ಎನ್ನುತ್ತಾರೆ. ಯಡಿಯೂರಪ್ಪನವರೂ ಇಷ್ಟು ವರ್ಷ ಮಲಗಿದ್ದು ಚುನಾವಣೆ ಬಂದ ಕೂಡಲೆ ಎದ್ದಿದ್ದಾರೆ ಎಂದು ಟೀಕಿಸಿದ್ದಾರೆ.

 

Leave a Reply

Your email address will not be published.