ಯಡಿಯೂರಪ್ಪ ಒಬ್ಬ ಊಸರವಳ್ಳಿ, ಬಿಜೆಪಿಯ ಗೋಸುಂಬೆ : ಆರ್‌.ಬಿ ತಿಮ್ಮಾಪುರ

ಬಾಗಲಕೋಟೆ : ಯಡಿಯೂರಪ್ಪ ಒಬ್ಬ ಊಸರವಳ್ಳಿ .ಬಿಜೆಪಿಯ ಗೋಸುಂಬೆ. ಅವರು ರಾಜಕೀಯ ಲಾಭಕ್ಕಾಗಿ ಬಣ್ಣ ಬದಲಾಯಿಸುತ್ತಾರೆ. ಟಿಪ್ಪು ವೇಷ ಹಾಕಿ ಖಡ್ಗ ಹಿಡಿದು ಪೋಸು ಕೊಟ್ಟ ಇವರು, ಕೆಜಿಪಿಯಲ್ಲಿದ್ದಾಗ ಟಿಪ್ಪು ಜಯಂತಿ ಬೇಕು, ಬಿಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಬೇಡ ಅಂದರೆ ಹೇಗೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಟೀಕಿಸಿದ್ದಾರೆ.

ಬಿಜೆಪಿ ಪರಿವರ್ತನಾ ರ್ಯಾಲಿ ಕುರಿತು ಆರ್ ಬಿ ತಿಮ್ಮಾಪುರ ವ್ಯಂಗ್ಯವಾಡಿದ್ದು,  ನಾವು ಜೈಲಿಗೆ ಹೋಗಿ ಬಂದವರು ಪರಿವರ್ತನೆಯಾಗುತ್ತಿದ್ದೇವೆ ಎಂದು ಜನರಿಗೆ ಹೇಳಲು ಹೊರಟಿದ್ದಾರೆ ಎಂದಿದ್ದಾರೆ. ಡಿಕೆಶಿ ಐಟಿ ರೇಡ್ ಮಾಡಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿರೋರು ಬಿಜೆಪಿಯವರು. ಕಾಂಗ್ರೆಸ್ ಯಾವುದೇ ಬ್ಲ್ಯಾಕ್ ಮೇಲ್ ಮಾಡೋದಿಲ್ಲ  ಎಂದಿದ್ದಾರೆ. ಕಾಂಗ್ರೆಸ್ ಪ್ರಭಾವಿ ಸಚಿವರ ಪೋನ್ ಕದ್ದಾಲಿಕೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಬಾಗಲಕೋಟೆಯಲ್ಲಿ ಯಾವುದೇ ಜನಪ್ರತಿನಿಧಿ ಬಳಿ ಹಣವಿಲ್ಲ. ಆದ್ದರಿಂದ ನಮ್ಮ ಪೋನ್ ಕದ್ದಾಲಿಕೆ ಮಾಡೋದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಅಂಬಾನಿ,ಅದಾನಿ ದೇಶವನ್ನು ಅಧೋಗತಿಗೆ ತಂದಿದ್ದಾರೆ. ಮೋದಿ,ಅದಾನಿ, ಅಂಬಾನಿ ಸೇರಿ ಈ ದೇಶದ ಆರ್ಥಿಕತೆ ಹಾಳು ಮಾಡಿದ್ದಾರೆ. ಕೆಲವೇ ಕೆಲ ಕಂಪನಿ ಹಿತ ಕಾಪಾಡಲು ನೋಟ್ ಬ್ಯಾನ್ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.

Leave a Reply

Your email address will not be published.