ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ : ಸಿಂಧು ಮಣಿಸಿ ಪ್ರಶಸ್ತಿ ಮುಡಿಗೇರಿಸಿದ ಸೈನಾ

ಓಲಿಂಪಿಕ್ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನ್ಯಾಷನಲ್ ಚಾಂಪಿಯನ್ಷಿಪ್ ಫೈನಲ್ ನಲ್ಲಿ ಪಿ.ವಿ ಸಿಂಧು ಅವರನ್ನು ಮಣಿಸಿ ಮಹಿಳೆಯರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಆಗಿದ್ದಾರೆ. ವಿಶ್ವದ 11ನೇ ಶ್ರೇಯಾಂಕಿತ ಆಟಗಾರ್ತಿಯಾದ ಸೈನಾ ನೆಹ್ವಾಲ್ ಬುಧವಾರ ನಾಗ್ಪುರದಲ್ಲಿ ನಡೆದ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನ ಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧು ಅವರನ್ನು 21-17, 27-25 ಪಾಯಿಂಟ್ ಗಳಿಂದ ನೇರ ಜಯ ಗಳಿಸಿದ್ದಾರೆ.

ಸೆಮಿಫೈನಲ್ ನಲ್ಲಿ ಸೈನಾ ನೆಹ್ವಾಲ್, ಅನುರಾ ಫ್ರಭುದೇಸಾಯಿ ಅವರನ್ನು 21-11, 21-10 ಪಾಯಿಂಟ್ ಗಳಿಂದ ಮಣಿಸಿ ಮಹಿಳೆಯರ ಸಿಂಗಲ್ಸ್ ಫೈನಲ್ ತಲುಪಿದ್ದರು.

2012 ರಲ್ಲಿ ನಡೆದ ಲಂಡನ್ ಓಲಿಂಪಿಕ್ ಪಂದ್ಯಾವಳಿಯಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಜಯಿಸಿದ್ದರು. 2016 ರಲ್ಲಿ ನಡೆದ ರಿಯೋ ಓಲಿಂಪಿಕ್ ಪಂದ್ಯಾವಳಿಯಲ್ಲಿ ಪಿ.ವಿ. ಸಿಂಧು ರಜತ ಪದಕ ಜಯಿಸಿದ್ದರು.

 

Leave a Reply

Your email address will not be published.