ನೋಟ್‌ ಬ್ಯಾನ್‌ಗೆ ಒಂದು ವರ್ಷ ಹಿನ್ನೆಲೆ : 500, 1000ದ ನೋಟುಗಳ ತಿಥಿ ಮಾಡಿ, ಪಿಂಡ ಪ್ರದಾನ…!

ಬೆಂಗಳೂರು : ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿಗೆ ತಂಡ ನೋಟು ಅಮಾನ್ಯೀಕರಣಕ್ಕೆ ಇಂದಿಗೆ ಒಂದು ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಕರಾಳ ದಿನವನ್ನು ಹಾಗೂ ಬಿಜೆಪಿ ಕಪ್ಪು ಹಣ ವಿರೋಧಿ ದಿನವನ್ನಾಗಿ ಆಚರಿಸಿದೆ.

ಅಲ್ಲದೆ ದೇಶದ ಹಲವೆಡೆ ವಿಭಿನ್ನ ರೀತಿಯಲ್ಲಿ ಮೋದಿ ಸರ್ಕಾರ ನೋಟು ಅಮಾನ್ಯೀಕರಣ ಮಾಡಿ ವಿಫಲವಾಗಿದೆ ಎಂದು ಟೀಕಿಸಿದ್ದು, ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ಅಂತೆಯೇ ಬೆಂಗಳೂರಿನಲ್ಲಿ ನವ ಭಾರತ ಪಕ್ಷದಿಂದ ಐನೂರು ಹಾಗೂ ಸಾವಿರ ರೂ ನೋಟಿನ ಪುಣ್ಯತಿಥಿ ಆಚರಣೆ ಮಾಡಲಾಗಿದೆ. ನೋಟುಗಳನ್ನಿಟ್ಟು ಅದಕ್ಕೆ ಪೂಜೆ ಮಾಡಿ, ಸಕಲ ವಿಧಿ- ವಿಧಾನಗಳಿಂದ ಪುಣ್ಯತಿಥಿ ಆಚರಿಸಲಾಗಿದ್ದು, ಪಿಂಡ ಪ್ರದಾನವನ್ನೂ ಮಾಡಲಾಯಿತು.

 

 

 

Leave a Reply

Your email address will not be published.

Social Media Auto Publish Powered By : XYZScripts.com