WATCH : ಐಶ್ವರ್ಯ ಅರ್ಜುನ್, ಚಂದನ್ ಅಭಿನಯದ ‘ಪ್ರೇಮ ಬರಹ’ ಚಿತ್ರದ ಟೀಸರ್..!

ಖ್ಯಾತ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಅರ್ಜುನ್ ಹಾಗೂ ಕಿರುತೆರೆಯ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟಿರುವ ನಟ ಚಂದನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಪ್ರೇಮ ಬರಹ’ ಟೀಸರ್ ಬಿಡಗಡೆಯಾಗಿದೆ. ಸ್ಯಾಂಡಲ್ ವುಡ್ ನ ಖ್ಯಾತನಾಮರು “ವಾಚ್ ಇಟ್ ಔಟ್ ಆನ್ ನವೆಂಬರ್ 7” ಎಂದು ಹೇಳಿ ಕುತೂಹಲ ಸೃಷ್ಟಿಸಿದ್ದ ಟೀಸರ್ ಕೊನೆಗೂ ಬಿಡುಗಡೆಗೊಂಡಿದೆ.
ನವೆಂಬರ್ 7 ರಂದು ಕಾದು ನೋಡಿ ಎಂದು ಕನ್ನಡ ಚಿತ್ರರಂಗದ ನಟರಾದ ಅಂಬರೀಶ್, ದರ್ಶನ್, ಅರ್ಜುನ್ ಸರ್ಜಾ, ನೀನಾಸಂ ಸತೀಶ್ ಮೊದಲಾದವರು ತುಂಬಾ ಕುತೂಹಲ ಮೂಡಿಸಿದ್ದರು. ಈ ಕುತೂಹಲಕ್ಕೆ ಕಿಚ್ಚ ಸುದೀಪ್ ತೆರೆ ಎಳೆದಿದ್ದಾರೆ. ಅರ್ಜುನ್ ಸರ್ಜಾ ನಟನೆಯ ಪ್ರೇಮ ಬರಹ, ಕೋಟಿ ತರಹ ಹಾಡಿನ ಸಾಲು ಈ ಚಿತ್ರದ ಶೀರ್ಷಿಕೆಯಾಗಿದ್ದು, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವುದರಿಂದ ಪ್ರೇಮಬರಹ ಚಿತ್ರ ಮತ್ತಷ್ಟು ವಿಶೇಷವೆನಿಸಿದೆ.
ತಮಿಳಿನಲ್ಲೂ ಚಿತ್ರ ನಿರ್ಮಾಣವಾಗುತ್ತಿದ್ದು, ಅರ್ಜುನ್ ಸರ್ಜಾ ಅವರು ಚಿತ್ರಕಥೆ ರಚಿಸಿದ್ದು ಅದರಲ್ಲಿ ಸುಹಾಸಿನಿ, ಸಾಧುಕೋಕಿಲಾ, ರಂಗಾಯಣ ರಘು ನಟಿಸಿದ್ದಾರೆ. ಅರ್ಜುನ್ ಸರ್ಜಾ ನಿರ್ಮಾಣ, ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಪ್ರೇಮ ಬರಹ’ ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.

 

Leave a Reply

Your email address will not be published.

Social Media Auto Publish Powered By : XYZScripts.com