ಫೇಸ್ ಬುಕ್ ನೋಡೋವಾಗ ಹಸಿವಾಗ್ತಾ ಇದ್ಯಾ..? ಹಾಗಾದ್ರೆ ಹೀಗೆ ಮಾಡಿ..!

       ಸುಜಿತ್ ಕಳಸ

ಸೋಶಿಯಲ್ ಮೀಡಿಯಾ ದೈತ್ಯ ಫೇಸ್ ಬುಕ್ ತನ್ನ ಬಳಕೆದಾರರಿಗೆ ದಿನಕ್ಕೊಂಡು ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ಸ್ಟೆಷಸ್ ಅಪ್ ಡೇಟ್, ಬೈ ಅಂಡ್ ಸೇಲ್ ಸೇರಿದಂತೆ ಹಲವು ಆಯ್ಕೆಗಳನ್ನು ನೀಡಿದ್ದು, ಈ ಬಾರಿ ಫುಡ್ ಆರ್ಡರ್ ಮಾಡುವ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದುವೇ ಅತೀ ಸುಲಭ ಮತ್ತು ಸರಳವಾಗಿದೆ.

ಅಲ್ಲದೇ ಇದು ಫುಡ್ ಗಳನ್ನು ಡಿಲಿವರಿ ಮಾಡುವ ಮತ್ತು ಪಿಕಪ್ ಮಾಡುವ ಎರಡು ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಈ ಆಯ್ಕೆಯನ್ನು ಕಳೆದ ವರ್ಷವೇ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು ಎನ್ನಲಾಗಿದೆ. ಆಂಡ್ರಾಯ್ಡ್ ಮತ್ತು ಆಪಲ್ ಬಳಕೆದಾರರಿಗೆ ಹಾಗೂ ಡೆಸ್ಕಟಾಪ್ ಬಳಕೆದಾರರು ಈ ಸೇವೆಯನ್ನು ಪಡೆಯಬಹುದಾಗಿದೆ. ಅದು ಅಮೆರಿಕಾದಲ್ಲಿ ಮಾತ್ರ.

ಈ ಆಯ್ಕೆ ಶೀಘ್ರವೇ ಭಾರತದಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇದಕ್ಕಾಗಿ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಫುಡ್ ಡೆಲಿವರಿ ಆಪ್ ಹಾಗೂ ವೆಬ್ ಸೈಟ್ ಗಳೋಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಿದೆ ಎನ್ನಲಾಗಿದ್ದು, ಇದರಿಂದಲೂ ಆದಾಯವನ್ನು ನಿರಿಕ್ಷೀಸುತ್ತಿದೆ.

ಇದಲ್ಲದೇ ಫೇಸ್ ಬುಕ್ ದೊಡ್ಡ ದೊಡ್ಡ ಫುಡ್ ಚೈನ್ ಗಳೊಂದಿಗೆ ಒಪ್ಪಂದ ಮಾಡಿಕೊಂಡು ಆಹಾರವನ್ನು ತಲುಪಿಸುವ ಕಾರ್ಯವನ್ನು ಮಾಡುವ ಆಲೋಚನೆಯಲ್ಲಿದೆ. ಅದಕ್ಕಾಗಿಯೇ ತನ್ನ ನ್ಯೂಸ್ ಫೀಡ್ಸ್ ನಲ್ಲಿ ಬದಲಾವಣೆಯನ್ನು ಮಾಡಲು ಮುಂದಾಗಿದೆ. ಇದರಂದ ಫೇಸ್ ಬುಕ್ ಬಳಕೆದಾರರು ತಮಗೆ ಹಸಿವಾದ ಬೇರೆ ಇನ್ನೊಂದು ಆಪ್ ತೆರೆದು ಫುಡ್ ಆರ್ಡರ್ ಮಾಡುವ ಬದಲು ಫೇಸ್ ಬುಕ್ ನಿಂದಲೇ ಆಹಾರವನ್ನು ತರಿಸಿಕೊಳ್ಳುವ ಸುಲಭ ಮಾರ್ಗವನ್ನು ಪರಿಚಯಿಸಲಾಗುತ್ತಿದೆ.

Leave a Reply

Your email address will not be published.