ಭಾರತದೊಂದಿಗೆ ಯುದ್ಧ ಮಾಡುವುದೇ ನಮ್ಮ ಆಯ್ಕೆಯಲ್ಲ : ಪಾಕ್ ಪ್ರಧಾನಿ
ಇಸ್ಲಾಮಾಬಾದ್ : ಭಾರತದ ಜೊತೆ ಯುದ್ದ ಮಾಡುವುದು ನಮ್ಮ ಆಯ್ಕೆಯಲ್ಲ ಎಂದು ಪಾಕ್ ಪ್ರಧಾನಿ ಶಾಹಿದ್ ಖಕನ್ ಅಬ್ಬಾಸಿ ಹೇಳಿದ್ದಾರೆ.
ಕಾಶ್ಮೀರ ವಿವಾದ ಬಗೆಹರಿಯುವವರೆಗೂ ಪಾಕಿಸ್ತಾನ ಮತ್ತು ಭಾರತದ ನಡುವೆ ಉದ್ವಿಗ್ನ ಪರಿಸ್ಥಿತಿ ಮುಂದುವರಿಯಲಿದೆ. ಆದರೆ ಅದಕ್ಕೆ ಯುದ್ಧ ಮಾಡುವುದು ನಮ್ಮ ಆಯ್ಕೆಯಲ್ಲ ಎಂದಿದ್ದಾರೆ.
ಸ್ವತಂತ್ರ್ಯ ಕಾಶ್ಮೀರ ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತಿದೆ. ಆದರೆ ಅದರಲ್ಲಿ ವಾಸ್ತವತೆಯೇ ಇಲ್ಲ. ಸ್ವತಂತ್ರ್ಯ ಕಾಶ್ಮೀರದ ಬೇಡಿಕೆಗೆ ಬೆಂಬಲ ಸಿಗುತ್ತಿಲ್ಲ. ಮಾತುಕತೆಯೊಂದೇ ಇದಕ್ಕೆ ದಾರಿ ಎಂದಿದ್ದಾರೆ.
ಭಯೋತ್ಪಾದನೆ ವಿರುದ್ಧ ಭಾರತ ದೊಡ್ಡ ಮಟ್ಟದಲ್ಲಿ ಯುದ್ದ ಮಾಡು್ತ್ತಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದನೆ ನಿರ್ಮೂಲನೆಯಾಗುವವರೆಗೂ ನಾವು ಬಿಡುವುದಿಲ್ಲ. ನಮ್ಮ ಸೇನೆಯ ಒಂದು ಭಾಗ ಭಯೋತ್ಪಾದನೆಯ ವಿರುದ್ದ ಹೋರಾಟ ನಡೆಸುತ್ತಿದೆ. ಪಾಕಿಸ್ತಾನದಲ್ಲಿ ಭದ್ರತಾ ಸಿಬ್ಬಂದಿ ಹೊರತು ಪಡಿಸಿ ಖಾಸಗಿ ವ್ಯಕ್ತಿಗಳ ಕೈಯಲ್ಲಿ ಸಹ ಸ್ವಯಂ ಚಾಲಿತ ಶಸ್ತ್ರಾಸ್ತ್ರಗಳಿವೆ. ಇದನ್ನು ಮಟ್ಟ ಹಾಕಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದಿದ್ದಾರೆ.