ನವೆಂಬರ್‌ 8, ಸಣ್ಣ ಉದ್ಯಮಗಳ ಬೆನ್ನೆಲುಬು ಮುರಿದ ದಿನ : ಮನಮೋಹನ್‌ ಸಿಂಗ್

ಸೂರತ್‌ : ಕೇಂದ್ರ ಸರ್ಕಾರದ ನೋಟು ನಿಷೇಧ ಹಾಗೂ ಅಸಮರ್ಪಕ ಜಿಎಸ್‌ಟಿ ಜಾರಿಯಿಂದಾಗಿ ಭಾರತದ ಆರ್ಥಿಕತೆಯ ಮೇಲೆ ಭಾರೀ ಹಾನಿಯುಂಟಾಗಿರುವುದಾಗಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

ಸೂರತ್‌ನಲ್ಲಿ ನಡೆದ ಭಾರತದ ಆರ್ಥಿಕತೆ ಕುರಿತು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸರ್ಕಾರ ಕೈಗೊಂಡ ಎರಡು ನಿರ್ಧಾರಗಳಿಂದಾಗಿ ಮಧ್ಯಮ ಗಾತ್ರದ ಉದ್ದಿಮೆಗಳ ಬೆನ್ನೆಲುಬು ಮುರಿದಂತಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯ ದೊಡ್ಡ ದುರಂತ ಇದು ಎಂದಿದ್ದಾರೆ.

ನವೆಂಬರ್‌ 8ರಂದು ನೋಟು ನಿಷೇಧ ಮಾಡಿ 1 ವರ್ಷವಾಗುತ್ತದೆ. ಇದು ಭಾರತದ ಇತಿಹಾಸದಲ್ಲೇ ಕರಾಳ ದಿನ. ನೋಟು ನಿಷೇಧದಿಂದಾಗಿ ಸಣ್ಣ ಸಣ್ಣ ಉದ್ದಿಮೆಗಳ ಬೆನ್ನೆಲುಬನ್ನೇ ಮುರಿದ ದಿನವಾಗಿದೆ. ಇದು ಕೇಂದ್ರ ಸರ್ಕಾರದ ಸಂಘಟಿತ ಮತ್ತು ಕಾನೂನು ಬಾಹಿರ ಲೂಟಿಯಾಗಿದೆ. ದೇಶದಲ್ಲಿ ತೆರಿಗೆ ಭಯೋತ್ಪಾದನೆ ಹುಟ್ಟುಕೊಂಡಿದ್ದು, ಸಣ್ಣ ಉದ್ದಿಮೆಗಳ ಧೈರ್ಯವನ್ನೇ ಕಸಿದುಕೊಂಡಿದೆ ಎಂದು ಸರ್ಕಾರದ ವಿರುದ್ದ ವಾಗ್ಧಾಳಿ ನಡೆಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ ಸರ್ಕಾರ 140 ಮಿಲಿಯನ್ ಜನರನ್ನು ಬಡತನದಿಂದ ಮೇಲೆತ್ತಿದೆ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com