3ನೇ ಟಿ-20ಯಲ್ಲಿ ಭಾರತಕ್ಕೆ ರೋಚಕ ಗೆಲುವು : ಸರಣಿ ಜಯಿಸಿದ ಟೀಮ್ ಇಂಡಿಯಾ

ತಿರುವನಂತಪುರಂ ನಲ್ಲಿ ನಡೆದ ಮೂರನೇ ಟಿ-ಟ್ವೆಂಟಿ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 6 ರನ್ ರೋಚಕ ಜಯಗಳಿಸಿದೆ. ಮಳೆ ಅಡ್ಡಿಪಡಿಸಿದ ಕಾರಣದಿಂದ ತಲಾ 8 ಓವರ್ ಗಳ ಪಂದ್ಯವನ್ನು ಆಡಿಸಲಾಯಿತು. ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿತು.

ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 8 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 67 ರನ್ ಮೊತ್ತ ಸೇರಿಸಿತು. ಭಾರತದ ಪರವಾಗಿ ಮನೀಶ್ ಪಾಂಡೆ 17, ಹಾರ್ದಿಕ್ ಪಾಂಡ್ಯ 14, ವಿರಾಟ್ ಕೊಹ್ಲಿ 13 ರನ್ ಗಳಿಸಿದರು. ಕಿವೀಸ್ ಪರವಾಗಿ ಟಿಮ್ ಸೌದೀ ಹಾಗೂ ಇಷ್ ಸೋಧಿ ತಲಾ 2 ವಿಕೆಟ್ ಪಡೆದರು.

ಚೇಸ್ ಮಾಡಲಿಳಿದ ನ್ಯೂಜಿಲೆಂಡ್ 8 ಓವರುಗಳಲ್ಲಿ 61 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲನುಭವಿಸಿತು. ಕೊನೆಯ ಓವರಿನಲ್ಲಿ ಕಿವೀಸ್ ತಂಡಕ್ಕೆ 19 ರನ್ ಬೇಕಿತ್ತು. ಕೊನೆಯ ಓವರ್ ಬೌಲ್ ಮಾಡಿದ ಹಾರ್ದಿಕ್ ಪಾಂಡ್ಯ ರನ್ ನೀಡಿ ಭಾರತದ ಗೆಲುವಿಗೆ ಕಾರಣರಾದರು. ಜಸ್ಪ್ರೀತ್ ಬುಮ್ರಾಹ್ 2 ಹಾಗೂ ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com