ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಷಿಪ್ : ಫೈನಲ್ ಗೆ ಭಾರತದ ಮೇರಿ ಕೋಮ್ , ಸೋನಿಯಾ

ಐದು ಬಾರಿಯ ವಿಶ್ವಚಾಂಪಿಯನ್ ಬಾಕ್ಸರ್ ಭಾರತದ ಮೇರಿ ಕೋಮ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ಮೇರಿ ಕೋಮ್ ಜಪಾನಿನ ಸುಬಾಸಾ ಕೊಮುರಾ 5-0 ಜಯಗಳಿಸಿದ್ದಾರೆ. ವಿಯೆಟ್ನಾಂ ದೇಶದ ಹೊ ಚಿ ಮಿನ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕೋರಿಯಾದ ಹ್ಯಾಂಗ್ ಮಿ ಕಿಮ್ ವಿರುದ್ಧ ಬಂಗಾರದ ಪದಕಕ್ಕಾಗಿ ಸೆಣಸಾಡಲಿದ್ದಾರೆ.

ಏಷ್ಯಾ ಚಾಂಪಿಯನ್ಷಿಪ್ ನಲ್ಲಿ ಇದುವರೆಗೂ ನಾಲ್ಕು ಸ್ವರ್ಣ ಪದಕಗಳನ್ನು ಗೆದ್ದಿರುವ ಮೇರಿ ಕೋಮ್ ಐದನೇ ಚಿನ್ನದ ಪದಕಕ್ಕಾಗಿ ಹೋರಾಡಲಿದ್ದಾರೆ. ರಾಜ್ಯಸಭಾ ಸದಸ್ಯೆ ಆಗಿರುವ 35 ವರ್ಷದ ಮೇರಿ ಕೋಮ್ ಓಲಿಂಪಿಕ್ ಕಂಚಿನ ಪದಕ ವಿಜೇತೆ ಕೂಡ ಹೌದು.

ಭಾರತದ ಮತ್ತೋರ್ವ ಬಾಕ್ಸರ್ ಸೊನಿಯಾ ಲಾಥರ್ ಅವರೂ ಸಹ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನ ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ಸೋನಿಯಾ ಲಾಥರ್ ಇದಕ್ಕೂ ಮೊದಲು ಏಷ್ಯನ್ ಚಾಂಪಿಯನ್ಷಿಪ್ ನಲ್ಲಿ ರಜತ ಪದಕ ವೀಜೇತೆ ಕೂಡ ಆಗಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com