BIGBOSS ಮೋಸ : ಇದೆಂಥಾ ಆರೋಪ ಮಾಡ್ತಿದ್ದಾರೆ ಅನುಪಮಾ..?

ಬಿಗ್‌ಬಾಸ್‌ ಸೀಸನ್‌ 5ರಲ್ಲಿ ವಿವಾದಗಳು ಹೆಚ್ಚುತ್ತಿವೆ  ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಬಾರಿ ಬಿಗ್‌ಬಾಸ್‌ ಸ್ಪರ್ಧಿಗೆ ಸ್ವತಃ ಬಿಗ್‌ಬಾಸ್‌ ಮೋಸ ಮಾಡಿದ್ದಾರಂತೆ. ಚಟುವಟಿಕೆಯಲ್ಲಿ ಗೆದ್ದವರನ್ನು ಕ್ಯಾಪ್ಟನ್‌ ಮಾಡದೆ ಬೇರೆಯವರನ್ನು ಕ್ಯಾಪ್ಟನ್‌ ಮಾಡಿದ್ದು ಬಿಗ್‌ಬಾಸ್‌ ನಿರ್ಧಾರ ಸರಿಯಲ್ಲ ಎಂದು ಸ್ಪರ್ಧಾಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಗ್‌ಬಾಸ್‌ ಸೋಮವಾರದ ಎಪಿಸೋಡ್‌ನಲ್ಲಿ ಕ್ಯಾಪ್ಟನ್ ಆಯ್ಕೆಗಾಗಿ ಟಾಸ್ಕ್ ಒಂದನ್ನು ನೀಡಿತ್ತು. ಈ ಟಾಸ್ಕ್ ನಲ್ಲಿ ಅನುಪಮಾ ಗೆದ್ದರೂ ಕ್ಯಾಪ್ಟನ್‌ ಆಗಲಿಲ್ಲ. ಆದ್ದರಿಂದ ಇದು ಮೋಸ ಎಂದು ಆರೋಪಿಸಿದ್ದಾರೆ. ಅಲ್ಲದೆ ಬಿಗ್‌ಬಾಸ್‌ಗೇ ಐ ಹೇಟ್ ಯು ಎಂದಿದ್ದಾರೆ.

ಕಳೆದ ಸಂಚಿಕೆಯಲ್ಲಿ ಕ್ಯಾಪ್ಟನ್‌ ಆಯ್ಕೆಗಾಗಿ ಬಿಗ್‌ಬಾಸ್ ಚಟುವಟಿಕೆಯೊಂದನ್ನು ನೀಡಿದ್ದರು. ಗಾರ್ಡನ್‌ ಏರಿಯಾದಲ್ಲಿ ಹದಿಮೂರು ಬ್ಲಾಕ್‌ಗಳಿದ್ದವು. ಅದರಲ್ಲಿ ಸ್ಪರ್ಧಿಗಳು ತಮಗೆ ಸಿಕ್ಕ ಚೀಟಿಯ ನಂಬರ್ ಆಧಾರದಲ್ಲಿ ನಿಂತು, ತಮಗೆ ನೀಡಿರುವ ತುಣುಕುಗಳನ್ನು ಜೋಡಿಸಬೇಕಿತ್ತು. ಅದರಂತೆ ಅನುಪಮಾ ಮೊದಲು ಚಿತ್ರವನ್ನು ಜೋಡಿಸಿದ್ದು, ಅದು ರಿಯಾಜ್ ಅವರ ಚಿತ್ರವಾಗಿತ್ತು.

ಆದರೆ ಮೊದಲು ಟಾಸ್ಕ್‌ ಪೂರೈಸಿದ ಅನುಪಮಾ ಅವರಿಗೆ ಕ್ಯಾಪ್ಟನ್‌ಶಿಪ್‌ ನೀಡುವುದನ್ನು ಬಿಟ್ಟು ರಿಯಾಜ್ ಅವರಿಗೆ ನಾಯಕತ್ವ ನೀಡಲಾಗುತ್ತಿದೆ ಎಂದು ಬಿಗ್‌ಬಾಸ್ ಆದೇಶಿಸಿದ್ದರು. ಇದರಿಂದ ಒಂದು ಕ್ಷಣ ದಂಗಾದ ಅನುಪಮಾ ಇದು ಮೋಸ, ಟಾಸ್ಕ್‌ ಮೊದಲು ಪೂರೈಸಿದ್ದು ನಾನು, ರಿಯಾಜ್‌ ಕ್ಯಾಪ್ಟನ್‌ ಆಗಲು ನಾನೇಕೆ ಕಷ್ಟಪಡಬೇಕಿತ್ತು ಎಂದು ಪ್ರಶ್ನಿಸಿದರು.

ಬಳಿಕ ನನಗೇನೂ ಕ್ಯಾಪ್ಟನ್‌ ಆಗಬೇಕು ಎಂಬ ಆಸೆ ಇರಲಿಲ್ಲ. ಆದರೂ ಬಿಗ್‌ಬಾಸ್‌ ಮಾಡಿದ್ದು ಮೋಸ ಎಂದು ಪದೇ ಪದೇ ಕ್ಯಾಮರಾ ಮುಂದೆ ಹೇಳಿದರು.

 

 

 

 

 

 

Leave a Reply

Your email address will not be published.

Social Media Auto Publish Powered By : XYZScripts.com