ಸತತ ಸೋಲಿನಿಂದ ಧೃತಿಗೆಡದೆ ಕೊನೆಗೂ ಯಶಸ್ಸು ಸಾಧಿಸಿದ “ನಿರ್ಭಯ್”
ಭುವನೇಶ್ವರ್ : ದೇಶೀ ನಿರ್ಮಿತ ಸಬ್ಸಾನಿಕ್ (ಶಬ್ದಕ್ಕಿಂತ ಕಡಿಮೆ ವೇಗದ ) ನಿರ್ಭಯ್ ಕ್ಷಿಪಮಿಯ 5ನೇ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಇದರಿಂದಾಗಿ ಭಾರತದ ರಕ್ಷಣಾ ಕ್ಷೇತ್ರಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ.
300 ಕೆ.ಜಿ ಸಿಡಿತಲೆಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದ್ದು, ಈ ಹಿಂದೆ ನಾಲ್ಕು ಬಾರಿ ನಡೆಸಿದ್ದ ಪ್ರಯೋಗ ವಿಫಲವಾಗಿತ್ತು.
ಒಡಿಶಾದ ಬಾಲಸೋರ್ನಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನ ಮೂರನೇ ಕಾಂಪ್ಲೆಕ್ಸ್ನಲ್ಲಿ ಮೊಬೈಲ್ ಲಾಂಚರ್ನ ಮೂಲಕ ನಿರ್ಭಯ್ ಕ್ಷಿಪಣಿಯನ್ನು ಇಂದು ಬೆಳಗ್ಗೆ ಉಡಾವಣೆ ಮಾಡಲಾಯಿತು.
ನಿರ್ಭಯ್ ಕ್ಷಿಪಣಿ ಸಿದ್ದವಾಗಿ ದಶಕಗಳೇ ಕಳೆದರೂ ಈವರೆಗೂ ನಡೆಸಿದ ನಾಲ್ಕು ಪ್ರಯೋಗಗಳು ವಿಫಲವಾಗಿತ್ತು. ಇದರಿಂದ ವಿಜ್ಞಾನಿಗಳಿಗೆ ನಿರಾಸೆಯಾಗಿತ್ತು. ಆದರೆ ಐದನೇ ಬಾರಿ ನಿರ್ಭಯ್ ಯಶಸ್ವಿಯಾಗಿ ಉಡಾವಣೆಗೊಂಡಿದೆ.