ಅರಮನೆ ಸೆಟ್‌ನಲ್ಲಿ “ಶಿವಗಾಮಿ”ಯ ಭರ್ಜರಿ ಶೂಟಿಂಗ್‌

ಬಾಹುಬಲಿಯಲ್ಲಿ ಶಿವಗಾಮಿಯ ಪಾತ್ರದ ಮೂಲಕ ಮಿಂಚಿದ್ದ ರಮ್ಯಾಕೃಷಣ ಈಗ ಶಿವಗಾಮಿ ಎಂಬ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೆ ತೆಲುಗಿನಲ್ಲಿ ಐದು ಸಿನಿಮಾ ನಿರ್ಮಿಸಿರುವ ಗಂಗಪಟ್ನಂ ಶ್ರೀಧರ್‌ ಮೊದಲ ಬಾರಿಗೆ ಕನ್ನಡದಲ್ಲಿ ಶಿವಗಾಮಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶಿವಗಾಮಿ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಬಾಕಿ ಇದ್ದು, ಅರಮನೆ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ.

9ನೇ ಶತಮಾನದ ರಾಣಿ ಶಿವಗಾಮಿಯಾಗಿ ರಮ್ಯಾಕೃಷ್ಣ ನಟಿಸುತ್ತಿದ್ದಾರೆ. ಸಿಂಪಲ್ಲಾಗ್‌ ಇನ್ನೊಂದ್‌ ಲವ್ ಸ್ಟೋರಿ ಸಿನಿಮಾದ ಪ್ರವೀಣ್‌ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಪಾಯಲ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ರವಿ ಕಾಳೆ, ರೋಲರ್‌ ರಘು, ಅವಿನಾಶ್‌, ಗೋಲಿಸೋಡ ಕ್ಯಾತಿಯ ಮಧು ಸೇರಿದಂತೆ ಅನೇಕರು ಅಭಿನಯಿಸುತ್ತಿದ್ದಾರೆ.

ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿಗೂ ಸಿನಿಮಾ ಡಬ್‌ ಆಗುತ್ತಿದ್ದು, ಬಾಹುಬಲಿ ತಂತ್ರಜ್ಞರಿಂದ ಗ್ರಾಫಿಕ್ಸ್ ಮಾಡಿಸುತ್ತಿದ್ದಾರೆ. ಸಿನಿಮಾಗೆ ವೀರ್‌ ಸಮರ್ಥ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ಯೋಗರಾಜ್‌ ಭಟ್‌, ಬಹದ್ದೂರ್ ಚೇತನ್‌, ವಿ.ನಾಗೇಂದ್ರ ಪ್ರಸಾದ್‌, ಗೌಸ್‌ಪೀರ್‌ ಸಾಹಿತ್ಯ ಸಿನಿಮಾಕ್ಕಿದೆ. ಜನವರಿಯಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೆಯುತ್ತಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com