2ನೇ ಟಿ-20ಯಲ್ಲಿ ನಿಧಾನ ಗತಿಯ ಇನ್ನಿಂಗ್ಸ್ : ಧೋನಿಗೆ ಲಕ್ಷ್ಮಣ್ ಹೇಳಿದ್ದೇನು..?

ಟಿ-20 ಮಾದರಿಯಲ್ಲಿ ಧೋನಿ ಯುವ ಆಟಗಾರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡುವುದಕ್ಕೆ ಇದು ಸರಿಯಾದ ಸಮಯಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ. ಅಜಿತ್ ಅಗರ್ಕರ್ ಕೂಡ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ.

ಶನಿವಾರ ನ್ಯೂಜಿಲೆಂಡ್ ವಿರುದ್ಧ ರಾಜಕೋಟ್ ನಲ್ಲಿ ನಡೆದ ಎರಡನೇ ಟಿಟ್ವೆಂಟಿ ಪಂದ್ಯದಲ್ಲಿ ಭಾರತ 40 ರನ್ ಸೋಲನ್ನು ಅನುಭವಿಸಿತ್ತು. ಮೊದಲು ಬ್ಯಾಟ್ ಮಾಡಿ ಕಿವೀಸ್ 196 ರನ್ ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಚೇಸ್ ಮಾಡಲಿಳಿದ ಭಾರತ 156 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ನಾಯಕ ವಿರಾಟ್ ಕೊಹ್ಲಿ 65 ರನ್ ಬಾರಿಸಿದ್ದರು. ಪಂದ್ಯದಲ್ಲಿ ಅತ್ಯಂತ ನಿಧಾನಗತಿಯ ಇನ್ನಿಂಗ್ಸ್ ಆಡಿದ ಮಹೇಂದ್ರ ಸಿಂಗ್ ಧೋನಿ 37 ಎಸೆತಗಳಲ್ಲಿ 49 ರನ್ ಗಳಿಸಿದ್ದರು.

Image result for dhoni rajkot nz

ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ರಾಜ್ಕೋಟ್ ನಲ್ಲಿ ಕೊಹ್ಲಿ ಉತ್ತಮ ಫಾರ್ಮ್ ನಲ್ಲಿದ್ದು ಒಳ್ಳೆಯ ಹೊಡೆತಗಳನ್ನು ಬಾರಿಸುತ್ತಿದ್ದರು. ಧೋನಿ ಸಿಂಗಲ್ ರನ್ ಗಳಿಸಿ ಕೊಹ್ಲಿಗೆ ಸ್ಟ್ರೈಕ್ ನಿಡಬೇಕಿತ್ತು. ಕೊಹ್ಲಿ ಸ್ಟ್ರೈಕ್ ರೇಟ್ 160 ಇದ್ದರೆ ಧೋನಿ ಸ್ಟ್ರೈಕ್ ರೇಟ್ 80 ಇತ್ತು. ದೊಡ್ಡ ಮೊತ್ತವನ್ನು ಚೇಸ್ ಮಾಡುವಾಗ ಇದು ಸಾಕಾಗುವುದಿಲ್ಲ. 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬರುವ ಧೋನಿಗೆ ಸೆಟ್ ಆಗಲು ಕೆಲ ಸಮಯ ಬೇಕಾಗುತ್ತದೆ ‘

ಟಿ-20 ಮಾದರಿಯ ಕ್ರಿಕೆಟ್ ನಲ್ಲಿ ಧೋನಿ ತಮ್ಮ ಸ್ಥಾನವನ್ನು ತೆರವುಗೊಳಿಸಿ ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವ ಸಮಯ ಬಂದಿದೆ. ಇದರಿಂದ ಯುವ ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್ ಅನುಭವ ಪಡೆದು ಆತ್ಮವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ, ಟಿ-20 ಯಲ್ಲಿ ಧೋನಿಯನ್ನು ಹೊರತು ಪಡಿಸಿ ಬೇರೆ ಆಯ್ಕೆಗಳಿಗಾಗಿ ನೋಡಬೇಕು. ಆದರೆ ಧೋನಿ ಏಕದಿನ ಮಾದರಿಯಲ್ಲಿ ಇನ್ನೂ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com