ಮೈದಾನದಲ್ಲಿ ಕಿಚ್ಚನ ಬ್ಯಾಟಿಂಗ್ ನೋಡಿ ಇಂಗ್ಲೆಂಡ್‌ ಆಟಗಾರ ಹೇಳಿದ್ದೇನು..?

ಸ್ಯಾಂಡಲ್ ವುಡ್‌ನ ಸೂಪರ್ ಸ್ಟಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಕೇವಲ ನಟನೆ ಮಾತ್ರವಲ್ಲ, ಹಾಡು ಹೇಳಿ, ಕ್ರಿಕೆಟ್‌ ಆಡಿಯೂ ಹುಚ್ಚೆಬ್ಬಿಸಿದ್ದಾರೆ. ಕಿಚ್ಚ ಸುದೀಪ್ ಬ್ಯಾಟಿಂಗ್ ಶೈಲಿಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಅದೇ ರೀತಿ ಕಿಚ್ಚ ಬ್ಯಾಟಿಂಗ್ ಮಾಡಿದ್ದನ್ನು ಇಂಗ್ಲೆಂಡ್‌ ಆಟಗಾರರೊಬ್ಬರು ಹೊಗಳಿ ಟ್ವೀಟ್‌ ಮಾಡಿದ್ದಾರೆ.

ಕಿಚ್ಚ ಸುದೀಪ್‌ ಆಲ್‌ ರೌಂಡರ್‌ ಇದ್ದಂತೆ. ಸಿನಿಮಾ ಮಾತ್ರವಲ್ಲ ಸಂಗೀತ, ಕ್ರಿಕೆಟ್‌ ಹೀಗೆ ಅನೇಕ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಟನೆ ಬಿಟ್ಟರೆ ಅವರು ಹೆಚ್ಚು ಇಷ್ಟಪಡುವುದು ಕ್ರಿಕೆಟನ್ನೇ ಎಂಬುದು ಅಭಿಮಾನಿಗಳಿಗೆ ತಿಳಿದ ವಿಷಯವೇ.

ಈಗಾಗಲೆ ಸಿಸಿಎಲ್‌ ಟೂರ್ನಿಗಾಗಿ ಕಿಚ್ಚ ಸುದೀಪ್‌ ತಯಾರಿ ನಡೆಸುತ್ತಿದ್ದಾರೆ. ಪ್ರಾಕ್ಟೀಸ್‌ ವೇಳೆ ಬೌಲರ್‌ ಎಸೆದ ಚೆಂಡನ್ನು ಸುದೀಪ್ ಸರಿಯಾದ ರೀತಿಯಲ್ಲಿ ಎದುರಿಸಿದ್ದು, ಇದನ್ನು ನೋಡಿದ ಇಂಗ್ಲೆಂಡ್‌ ಆಟಗಾರ ಓವೈಸ್‌ ಶಾ ಸುದೀಪ್‌ ಅವರನ್ನು ಕೊಂಡಾಡಿದ್ದಾರೆ.

Leave a Reply

Your email address will not be published.