Technology : ಜೀಯೋ ಎಫ್ಫೆಕ್ಟ್..30 ಸಾವಿರ ಉದ್ಯೋಗಿಗಳು ಬೀದಿಪಾಲು..??

ಸುಜಿತ್ ಕಳಸ

ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರದಿಂದಾಗಿ ಟೆಲಿಕಾಂ ಕಂಪೆನಿಗಳ ಮೇಲೆ ಭಾರೀ ಪರಿಣಾಮ ಬೀರುತ್ತಿದ್ದು, ಟೆಲಿಕಾಂ ಕಂಪೆನಿಗಳ ನಷ್ಟ, ಮಾರಾಟ ಮತ್ತು ವಿಲೀನ ಪರಿಣಾಮಗಳಿಂದ ಮುಂದಿನ ಒಂದು ವರ್ಷದಲ್ಲಿ 30 ಸಾವಿರಕ್ಕಿಂತ ಹೆಚ್ಚು ಹುದ್ದೆಗಳು ಕಡಿತವಾಗುವ ಸಂಭವ ಇದೆ ಎಂದು ನೇಮಕಾತಿ ವಲಯದ ಸಂಸ್ಥೆಗಳು ತಿಳಿಸಿವೆ.!!

ಟೆಲಿಕಾಂನಲ್ಲಿ ದರಗಳ ಸಮರ ಶುರುವಾದಾಗಿನಿಂದಲೂ ಟೆಲಿಕಾಂ ಉದ್ಯೋಗ ವಲಯದ ಒಟ್ಟಾರೆ ಚಿತ್ರಣ ನಿರಾಶಾದಾಯಕವಾಗಿದ್ದು, ಇದರಿಂದ ಟೆಲಿಕಾಂ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.!

ಜಿಯೋಯಿಂದ ಗ್ರಾಹಕರು ಅತ್ಯಂತ ಕಡಿಮೆ ಬೆಲೆಗೆ ಟೆಲಿಕಾಂ ಸೇವೆಗಳನ್ನು ಪಡೆದು ಆನಂದಿಸಿದರೆ, ಇತ್ತ 20ರಿಂದ 30 ಸಾವಿರ ಟೆಲಿಕಾಂ ನೌಕರರು ತಮ್ಮ ಉದ್ಯೋಗ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.! ಜಿಯೋಯಿಂದಾಗಿ ಇತರ ಟೆಲಿಕಾಂಗಳ ಆದಾಯ ಕುಸಿದಿರುವುದು ಭಾರೀ ಹುದ್ದೆಗಳ ಕಡಿತಕ್ಕೆ ಮೂಲ ಕಾರಣ ಎನ್ನಲಾಗಿದೆ.!!
ಜಿಯೋ ಬಂದ ನಂತರ ಕೇವಲ ಒಂದೇ ವರ್ಷದಲ್ಲಿ ಭಾರತೀಯ ಟೆಲಿಕಾಂ ಹೆಚ್ಚು ಬದಲಾವಣೆಗಳನ್ನು ಕಂಡಿದ್ದು, ಟೆಲಿಕಾಂ ವಲಯದಲ್ಲಿ ಕಂಪನಿಗಳ ಮಾರಾಟ, ವಿಲೀನ, ಸ್ಥಗಿತದಂತಹ ಚಟುವಟಿಕೆಗಳು ಏರ್ಪಟ್ಟಿವೆ. ಇವುಗಳ ಪರಿಣಾಮಗಳಿಂದಾಗಿ ಭವಿಷ್ಯದಲ್ಲಿ ಸಾವಿರಾರು ಉದ್ಯೋಗ ನಷ್ಟವಾಗುವ ಭೀತಿ ಎದುರಾಗಿದೆ.!!


ಇಡೀ ಭಾರತೀಯ ಟೆಲಿಕಾಂ ವಲಯ ಒಟ್ಟಾಗಿ 8 ಲಕ್ಷ ಕೋಟಿ ರೂ. ಸಾಲದ ಹೊರೆ ಎದುರಿಸುತ್ತಿದ್ದು, ಇದರ ಜೊತೆಯಲ್ಲಿಯೇ ಎಲ್ಲಾ ಟೆಲಿಕಾಂ ಕಂಪೆನಿಗಳು ಕೂಡ ನಷ್ಟಕ್ಕೆ ಗುರಿಯಾಗುತ್ತಿದ್ದು, ರಿಲಯನ್ಸ್‌ ಜಿಯೊ ಪ್ರವೇಶದ ನಂತರ ಟೆಲಿಕಾಂ ಕಂಪನಿಗಳು ತೀವ್ರ ಒತ್ತಡ ಎದುರಿಸುತ್ತಿವೆ.

ಜಿಯೋಗೆ ಸೆಡ್ಡುಹೊಡೆಯಲು ಐಡಿಯಾ ಮತ್ತು ವೊಡಾಪೋನ್ ವಿಲೀನವಾದರೆ, ಟಾಟಾ ಸಮೂಹವನ್ನು ಏರ್‌ಟೆಲ್‌ಗೆ ಖರೀದಿಸಿದೆ. ಇನ್ನು ರಿಲಯನ್ಸ್ ಕಮ್ಯುನಿಕೇಶನ್ಸ್ ಹೆಚ್ಚು ನಷ್ಟದಿಂದಾಗಿ ‌ ತನ್ನ ವೈರ್‌ಲೆಸ್‌ ಬಿಸಿನೆಸ್‌ ಅನ್ನು ಶೀಘ್ರದಲ್ಲಿಯೇ ಸ್ಥಗಿತಗೊಳಿಸುತ್ತಿದೆ. ಇದರಿಂದ ಟೆಲಿಕಾಂನಲ್ಲಿ ಭಾರೀ ಹುದ್ದೆಗಳು ಕಡಿತವಾಗುತ್ತಿವೆ.

ಟೆಲಿಕಾಂ ಕಂಪೆನಿಯಲ್ಲಿ ಎಚ್‌ಆರ್‌, ನೆಟ್‌ವರ್ಕಿಂಗ್, ಸೇಲ್ಸ್, ಟೆಲಿಕಾಂ ಎಂಜಿನಿಯರಿಂಗ್ ಮತ್ತು ಕಾಲ್‌ ಸೆಂಟರ್‌ ವಿಭಾಗಗಳು ಉದ್ಯೋಗ ನಷ್ಟದ ಆತಂಕದಲ್ಲಿವೆ.

Leave a Reply

Your email address will not be published.

Social Media Auto Publish Powered By : XYZScripts.com