ಬಿಜೆಪಿ ಪರಿವರ್ತನಾ ರ್ಯಾಲಿ ವೇಳೆ ತೆಂಗಿನಕಾಯಿ ಎಸೆತ : 9 ಮಂದಿ ವಿರುದ್ಧ ಕೇಸ್‌ ದಾಖಲು

ತುಮಕೂರು : ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂಬ ಹಠ ಹೊತ್ತು, ಪರಿವರ್ತಾನಾ ರ್ಯಾಲಿ ನಡೆಸುತ್ತಿರುವ ಬಿಜೆಪಿಯವರಿಗೆ ಪ್ರತೀ ಹಂತದಲ್ಲೂ ಮುಖಬಂಗ ಅನುಭವಿಸುವ ಸ್ಥಿತಿ ಉಂಟಾಗಿದೆ. ತುಮಕೂರಿನಲ್ಲಿ ಪರಿವರ್ತನಾ ರ್ಯಾಲಿ ವೇಳೆ ತೆಂಗಿನಕಾಯಿ ಎಸೆದ ಪ್ರಕರಣ ಸಂಬಂಧ ಬಿಜೆಪಿ ಉಚ್ಛಾಟಿತ ನಾಯಕ ಚೌಧರಿ ನಾಗೇಶ್ ಹಾಗೂ ಅವರ ಬೆಂಬಲಿಗರು ಸೇರಿದಂತೆ  ಒಂಬತ್ತು ಮಂದಿ ವಿರುದ್ದ ದಂಡಿನ ಶಿವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತುಮಕೂರಿನ ತುರುವೇಕೆರೆಯ ಬಾಣಸಂದ್ರದಲ್ಲಿ ರ್ಯಾಲಿ ನಡೆಸುವ ವೇಳೆ ಬಿಜೆಪಿ ರಥದ ಮೇಲೆ ಚೌದರಿ ನಾಗೇಶ್‌ ಬೆಂಬಲಿಗರು ತೆಂಗಿನಕಾಯಿ ಎಸೆದು ದಾಂಧಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಬಿಜೆಪಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಒಂಬತ್ತು ಮಂದಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

 

Leave a Reply

Your email address will not be published.