ಗುಪ್ತಾಂಗಕ್ಕೆ ಕಾರದಪುಡಿ ಹಾಕಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ರು, ಬಳಿಕ ವಿಡಿಯೊ ಅಪ್ಲೋಡ್ ಮಾಡಿದ್ರು..!

ದೆಹಲಿ : ಹತ್ತು ಮಂದಿಯ ಗುಂಪೊಂದು ಇಬ್ಬರು ಬಾಲಕರನ್ನು ಪರಸ್ಪರ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿ ಚಿತ್ರಹಿಂಸೆ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೆ ಅದನ್ನು ವಿಡಿಯೊ ಮಾಡಿದ್ದು, ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

 

ಪ್ರಕರಣ ಸಂಬಂದ 10 ಆರೋಪಿಗಳ ವಿರುದ್ದ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

 

ಹತ್ತು ಮಂದಿಯಲ್ಲಿ ಒಬ್ಬನಾದ ಕನ್ವರ್‌ ಸಿಂಗ್‌ ಮನೆಯಲ್ಲಿ ಕಳ್ಳತನವಾಗಿತ್ತು. ಆ ಕಳ್ಳತನದಲ್ಲಿ ಸಂತ್ರಸ್ತ ಹುಡುಗರು ಭಾಗಿಯಾಗಿದ್ದಾರೆ ಎಂದು ಅನುಮಾನಿಸಿ, ನಂತರ ಬಾಲಕರನ್ನು ಕರೆಸಿ ಬೆಲ್ಟ್‌ನಲ್ಲಿ ಹೊಡೆದಿದ್ದಾನೆ. ತಾವು ಕಳ್ಳತನ ಮಾಡಿಲ್ಲ ಎಂದು ಎಷ್ಟೇ ಹೇಳಿದರೂ ಕೇಲದ ಕನ್ವರ್ ಸಿಂಗ್‌, ತನ್ನ 15 ಮಂದಿ ಸ್ನೇಹಿತರನ್ನು ಕರೆಸಿ ಐದು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾನೆ. ಇಬ್ಬರು ಬಾಲಕರ ಬಟ್ಟೆ ಬಿಚ್ಚಿಸಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದು, ಅದನ್ನು ವಿಡಿಯೊ ಮಾಡಿದ್ದಾರೆ. ಅಲ್ಲದೆ,  ಬಾಲಕರ ಗುಪ್ತಾಂಗಕ್ಕೆ ಕಾರದ ಪುಡಿ, ಪೆಟ್ರೋಲ್‌ ಹಾಕಿ ಸಿಗರೇಟಿನಿಂದ ಸುಟ್ಟಿದ್ದಾರೆ. ಈ ವಿಚಾರವನ್ನು ಪೊಲೀಸರಿಗೆ ಅಥವಾ ಮನೆಯವರಿಗೆ ತಿಳಿಸಿದರೆ ಈ ವಿಡಿಯೊವನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿ ಕಳುಹಿಸಿದ್ದಾರೆ. ಬಳಿಕ ವಿಡಿಯೊವನ್ನು ಅಪ್‌ಲೋಡ್‌ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ನೋಡಿದ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 10 ಮಂದಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com