CRICKET : ದ್ವಿಶತಕ ಬಾರಿಸಿ ಮಿಂಚಿದ ಮುಂಬೈ ಹುಡಗಿ ಜೆಮಿಮಾ ರೋಡ್ರಿಗೆಸ್

ಭಾರತದ ಬ್ಯಾಟಿಂಗ್ ನರ್ಸರಿ ಎಂದೇ ಖ್ಯಾತಿಯಾಗಿರುವ ಮುಂಬೈ, ಹಲವಾರು ವರ್ಷಗಳಿಂದ ಅನೇಕ ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನು ನೀಡಿದೆ. ಸುನಿಲ್ ಗವಾಸ್ಕರ್, ರವಿಶಾಸ್ತ್ರಿ, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ ಇನ್ನೂ ಅನೇಕರು ಟೀಮ್ ಇಂಡಿಯಾ ಪರವಾಗಿ ಆಡಿದ್ದಾರೆ. ರಣಜಿಯಲ್ಲಿ ಮುಂಬೈನ ಯುವ ಆಟಗಾರ ಪೃಥ್ವಿ ಷಾ ಮಿಂಚುತ್ತಿದ್ದಾನೆ. ಈಗ ಮುಂಬೈನ 16 ವರ್ಷದ ಹುಡಗಿಯೊಬ್ಬಳು ದ್ವಿಶತಕ ಬಾರಿಸಿದ ಸಾಧನೆ ಮಾಡಿದ್ದಾಳೆ.

Image result for jemimah rodrigues

ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ 16 ವರ್ಷದ ಜೆಮಿಮಾ ರೋಡ್ರಿಗೆಜ್ ದ್ವಿಶತಕ ಬಾರಿಸಿದ್ದಾಳೆ.  50 ಓವರಿನ ಪಂದ್ಯದಲ್ಲಿ, 19 ವರ್ಷ ವಯಸ್ಸಿನೊಳಗಿನ ಮುಂಬೈ ತಂಡದ ಪರವಾಗಿ ಆಡುವ ಜೆಮಿಮಾ ರೋಡ್ರಿಗೆಜ್ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಭರ್ಜರಿ ದ್ವಿಶತಕ ದಾಖಲಿಸಿದ್ದಾಳೆ.  ಬಲಗೈ ಬ್ಯಾಟ್ಸಮನ್ ಆಗಿರುವ ಜೆಮಿಮಾ ರೋಡ್ರಿಗೆಜ್ 163 ಬಾಲ್ ಎದುರಿಸಿ 202 ರನ್ ಗಳಿಸಿದ್ದಾಳೆ.

Image result for jemimah rodrigues

ಜೆಮಿಮಾಳ ಅಮೋಘ ಇನ್ನಿಂಗ್ಸ್ ನೆರವಿನಿಂದ ಮುಂಬೈ 347 ರನ್ನುಗಳ ಬೃಹತ್ ಮೊತ್ತ ಸೇರಿಸಲು ಸಾಧ್ಯವಾಗಿತ್ತು. ರಾಜ್ಯಮಟ್ಟದ ಹಾಕಿ ಆಟಗಾರ್ತಿಯೂ ಆಗಿದ್ದ ಜೆಮಿಮಾ, 17 ವರ್ಷದೊಳಗಿನವರ ಪಂದ್ಯಾವಳಿಯಲ್ಲಿಯೂ ಭಾಗವಹಿಸಿದ್ದಾಳೆ.

Image result for jemimah rodrigues

ಹೀಗೆಯೆ ಉತ್ತಮ ಪ್ರದರ್ಶನ ನೀಡುತ್ತ ಸಾಗಿದರೆ ಜೆಮಿಮಾ, ಮುಂದೊಂದು ದಿನ ಭಾರತದ ಪರವಾಗಿ ಆಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಕೆಲ ತಿಂಗಳುಗಳ ಹಿಂದೆ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡ ಮಹಿಳಾ ವಿಶ್ವಕಪ್ ನಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿತ್ತು.

Leave a Reply

Your email address will not be published.