ಏಷ್ಯಾಕಪ್ ಹಾಕಿ : 13 ವರ್ಷಗಳ ನಂತರ ಚಾಂಪಿಯನ್ ಆದ ಭಾರತದ ವನಿತೆಯರು..

ರವಿವಾರ ನಡೆದ ಏಷ್ಯಾಕಪ್ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಚೀನಾ ತಂಡವನ್ನು ಮಣಿಸಿದ ರಾಣಿ ರಾಂಪಾಲ್ ನೇತೃತ್ವದ ಭಾರತದ ವನಿತೆಯರು ಏಷ್ಯಾಕಪ್ ಚಾಂಪಿಯನ್ ಆಗಿದ್ದಾರೆ. 13 ವರ್ಷಗಳ ಹಿಂದೆ 2004 ರಲ್ಲಿ ಜಪಾನ್ ವಿರುದ್ಧ 1-0 ರಿಂದ ಜಯಗಳಿಸಿ ಭಾರತದ ಮಹಿಳಾ ತಂಡದವರು ಟ್ರೋಫಿ ಎತ್ತಿ ಹಿಡಿದಿದ್ದರು.

ಪಂದ್ಯದ 25 ನೇ ನಿಮಿಷದಲ್ಲಿ ಭಾರತದ ಪರವಾಗಿ ನವಜೋತ್ ಕೌರ್ ಮೊದಲ ಗೋಲು ಬಾರಿಸಿದರು. 47 ನಿಮಿಷದಲ್ಲಿ ಟಿಯಾಂಟಿಯನ್ ಲುವೋ ಚಿಣಾದ ಪರವಾಗಿ ಗೋಲ್ ದಾಖಲಿಸಿದರು. ನಿಗದಿತ 70 ನಿಮಿಷಗಳ ಅವಧಿ ಮುಗಿದಾಗ ಸ್ಕೋರ್ 1-1 ರಿಂದ ಸಮವಾಗಿತ್ತು. ನಂತರ ಶೂಟೌಟ್ ಮೂಲಕ ಫಲಿತಾಂಶವನ್ನು ನಿರ್ಣಯಿಸಲಾಯಿತು. ಶೂಟೌಟ್ ನಲ್ಲಿ ಭಾರತದ ಗೋಲ್ ಕೀಪರ್ ಸವಿತಾ ಅವರ ಅದ್ಭುತ ಸೇವ್ ನಿಂದ ಭಾರತದ ವನಿತೆಯರು 5-4 ಗೋಲುಗಳಿಂದ ಜಯ ಗಳಿಸಿದರು.

ಏಷ್ಯಾ ಕಪ್ ಜಯಿಸುವ ಮೂಲಕ ಭಾರತದ ವನಿತೆಯರ ತಂಡ ಮುಂದಿನ ವರ್ಷ ನಡೆಯಲಿರುವ ಮಹಿಳಾ ಹಾಕಿ ವಿಶ್ವಕಪ್ ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿದೆ.

Leave a Reply

Your email address will not be published.

Social Media Auto Publish Powered By : XYZScripts.com