ಹುಟ್ಟುಹಬ್ಬದ ದಿನವೇ ವೃತ್ತಿ ಬದುಕಿನ ವಿದಾಯದ ಕುರಿತು ಕೊಹ್ಲಿ ಹೇಳಿದ್ದೇನು..?

ದೆಹಲಿ : ಟೀ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಇಂದು ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಇದೇ ವೇಳೆ ಅವರು ತಮ್ಮ ನಿವೃತ್ತಿಯ ಕುರಿತು ಹೇಳಿಕೆ ನೀಡಿದ್ದಾರೆ.

ಬ್ರೇಕ್ ಪಾಸ್ಟ್ ವಿತ್‌ ಚಾಂಪಿಯನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೊಹ್ಲಿ, ನಾನು ಎಂದಿಗೂ ಉತ್ತಮವಾಗಿ ಕ್ರಿಕೆಟ್‌ ಆಡಲು ಬಯಸುತ್ತೇನೆ. ಸದಾ ಉತ್ತಮವಾಗಿ ಆಡಬೇಕೆಂಬುದೇ ನನ್ನ ಆಸೆ.

ಎಲ್ಲಿಯವರೆಗೆ ನನ್ನ ದೇಹ ಆಟಕ್ಕೆ ಸ್ಪಂದಿಸುತ್ತದೆಯೋ ಅಲ್ಲಿಯವರೆಗೆ ನಾನು ಆಡುತ್ತೇನೆ. ನನ್ನ ದೇಹ ಸಪೋರ್ಟ್‌ ಮಾಡಲಿಲ್ಲ ಎಂದಾದರೆ ಅಂದೇ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ.

ಆಟವಾಡುವುದರಲ್ಲಿ ಸದಾ ಉತ್ಸಾಹವಿರಬೇಕು. ಉತ್ಸಾಹವಿಲ್ಲದೆ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಸಾಮರ್ಥ್ಯವಿದ್ದಷ್ಟು ದಿನ ಕ್ರಿಕೆಟ್‌ ಆಡುವುದಾಗಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಫಿಟ್ನೆಸ್‌ ಕಾಪಾಡಿಕೊಂಡು ಬಂದಿದ್ದು, ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತು ಪಡಿಸಿದ್ದಾರೆ.

Leave a Reply

Your email address will not be published.