ಕಮಲ್‌ ಹಾಸನ್‌ ಮುಖಕ್ಕೆ ಮಸಿ ಬಳಿದವರಿಗೆ ಮುಸ್ಲಿಂ ವ್ಯಕ್ತಿಯಿಂದ 25 ಸಾವಿರ ಬಹುಮಾನ ಘೋಷಣೆ !

ಲಖನೌ : ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದದ್ ತಮಿಳು ನಟ ಕಮಲ್ ಹಾಸನ್ ಮುಖಕ್ಕೆ ಮಸಿ ಬಳಿದರೆ ಅಂತಹವರಿಗೆ 25 ಸಾವಿರ ರೂ ನೀಡುವುದಾಗಿ ಮುಸ್ಲಿಂ ಯುವಕನೊಬ್ಬ ಹೇಳಿದ್ದಾನೆ.

ಉತ್ತರ ಪ್ರದೇಶದ ಅಲಿಗಢದ ಮುಸ್ಲಿಂ ಯುವಕನೊಬ್ಬ ಕಮಲ್ ಹಾಸನ್‌ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕಮಲ್ ಹಾಸನ್ ಮುಖಕ್ಕೆ ಮಸಿ ಬಳಿದವರಿಗೆ 25 ಸಾವಿರ ರೂ ನೀಡುತ್ತೇನೆ ಎಂದಿರುವುದಾಗಿ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಹಿಂದೂ ಹಾಗೂ ಮುಸ್ಲೀಮರು ಸೌಹಾರ್ದಯುತವಾಗಿ ಬದುಕುತ್ತಿದ್ದೇವೆ. ಇದಕ್ಕೆ ಬೆಂಕಿ ಹಚ್ಚುವ ಪ್ರಯತ್ನ ನಡೆಸಲಾಗುತ್ತಿದೆ. ಕಮಲ್‌ ಹಾಸನ್ ಒಬ್ಬ ದೇಶದ್ರೋಹಿ ಎಂದು ಅಲಿಗಢದ ಮುಸ್ಲಿಂ ಯುವ ಅಸೋಸಿಯೇಸನ್‌ ಅಧ್ಯಕ್ಷ ಮಹಮ್ಮದ್‌ ಅಮೀರ್‌ ರಷೀದ್‌ ಹೇಳಿದ್ದಾರೆ. ಅಲ್ಲದೆ ಹಿಂದುಗಳು ಭಯೋತ್ಪಾದಕರಾಗಿದ್ದರೆ ದೇಶದಲ್ಲಿ ಯಾರೂ ಸುರಕ್ಷಿತವಾಗಿ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಕೋಮು ಸೌಹಾರ್ದಕ್ಕೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಇಂತಹವರ ನಾಲಿಗೆಯನ್ನು ಕತ್ತರಿಸಬೇಕು ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com