ಪರಿವರ್ತನಾ ರ್ಯಾಲಿ ಸಂಪೂರ್ಣ ವಿಫಲ : ಬಿಎಸ್‌ವೈಗೆ ಇನ್ನೂ ಕೆಜೆಪಿ ಮೇಲೆಯೇ ಒಲವಿದೆ : ಸೊಗಡು ಶಿವಣ್ಣ

ತುಮಕೂರು : ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ತಮಕೂರಿನಲ್ಲಿ ನಡೆದ  ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ರ್ಯಾಲಿ ಸಂಪೂರ್ಣ ವಿಫಲವಾಗಿದೆ. ರ್ಯಾಲಿಯಲ್ಲಿ ಎಲ್ಲರೂ ಒಗ್ಗೂಡಲು ಅವಕಾಶ ಮಾಡಿಕೊಡುತ್ತಿಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಚಾರ ಸಂಬಂದ ತುಮಕೂರಿನಲ್ಲಿ ಮಾತನಾಡಿದ ಶಿವಣ್ಣ, ತುಮಕೂರಿನಲ್ಲಿ ಬಿಜೆಪಿ ಅಪ್ಪ ಮಕ್ಕಳ ಪಕ್ಷವಾಗಿದೆ. ಇಲ್ಲಿ ಪರಿವರ್ತನಾ ಯಾತ್ರೆ ವಿಫಲವಾಗಿದ್ದು, ಅದು ಬಿಜೆಪಿ ಯಾತ್ರೆಯಾಗಿರದೆ ಕೆಜೆಪಿ ಯಾತ್ರೆಯಾಗಿದೆ. ಯಡಿಯೂರಪ್ಪ ಅವರಿಗೆ ಬಿಜೆಪಿ ಎಂದರೆ ಇಷ್ಟವಿಲ್ಲ. ಅವರಿಗೆ ಇನ್ನೂ ಕೆಜೆಪಿ ಮೇಲೆಯೇ ಪ್ರೀತಿ ಇದೆ. ಸಮಾವೇಶಕ್ಕೆ ಬನ್ನಿ ಎಂದು ಬಿಎಸ್‌ವೈ ಕರೆ ಮಾಡಿದ್ದರು. ಆದರೆ ಅವರು ಮೂಲ ಕಾರ್ಯಕರ್ತರನ್ನೇ ಬಿಟ್ಟು ಹೊರಡುತ್ತಿದ್ದಾರೆ. ಆದ್ದರಿಂದ ತುಮಕೂರಿಗೆ ಹೋಗಲು ನಿರಾಕರಿಸಿರುವುದಾಗಿ ಹೇಳಿದ್ದಾರೆ.

ಕೆಜೆಪಿಯಿಂದ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನನ್ನ ಸಹನೆ ಕಟ್ಟೆಯೊಡೆಯುವ ಹಂತ ತಲುಪಿದೆ. ನನಗೆ ಪಕ್ಷ ನಿಷ್ಠೆ ಬಹಲ ಮುಖ್ಯ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಫರ್ಧಿಸುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com