ತಿರುವನಂತಪುರಂ : ಹೆಣ್ಣು ಮಗು ಹುಟ್ಟಿದ್ರೆ ಚಿನ್ನದ ಭಾಗ್ಯ

ತಿರುವನಂತಪುರಂ : ಹೆಣ್ಣು ಮಗು ಹುಟ್ಟಿದ್ರೆ ಅನಿಷ್ಟ, ಶಾಪ ಎಂದು ಬೀದಿಗೆ ಎಸೆಯುವ ಸಂಗತಿ ಇಂದಿಗೂ ನಡೆಯುತ್ತಿದೆ. ಆದರೆ ಕೇರಳದ ಮಣಪ್ಪುರಂ ಜಿಲ್ಲೆಯಲ್ಲಿ ಹೆಣ್ಣು ಮಗುವಾದರೆ ಚಿನ್ನವನ್ನು ನೀಡುವ ಮೂಲಕ ಹೆಣ್ಣು ಮಕ್ಕಳ ರಕ್ಷಣೆ ಮಾಡಲಾಗುತ್ತಿದೆ.

ಮಣಪ್ಪುರಂ ಜಿಲ್ಲೆಯ ಪುರಸಬೆಯ ಕೌನ್ಸಿಲರ್‌ ಅಬ್ದುಲ್‌ ರಹೀಮ್‌ ಎಂಬುವವರು ಈ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮ ವಾರ್ಡ್‌ನಲ್ಲಿ ಯಾವುದೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಆ ಮನೆಗೆ 1 ಗ್ರಾಂ ಚಿನ್ನದ ನಾಣ್ಯ ನೀಡುತ್ತಿದ್ದು, ಕಳೆದ ಎರಡು ವರ್ಷದಿಂದ ಈ ಕೆಲಸ ಮಾಡುತ್ತಿದ್ದಾರೆ.

ಇದುವರೆಗೂ ಅವರು 16 ಮಹಿಳೆಯರಿಗೆ ಚಿನ್ನದ ನಾಣ್ಯ ನೀಡಿದ್ದಾರೆ. ಆದರೆ ಇಷ್ಟು ದಿನ 1 ಚಿನ್ನದ ನಾಣ್ಯ ನೀಡುತ್ತಿದ್ದವರು ಇನ್ನು ಮುಂದೆ ಎರಡು ಚಿನ್ನದ ನಾಣ್ಯ ನೀಡಲು ನಿರ್ಧರಿಸಿದ್ದಾರಂತೆ.

ನನಗೆ ತಿಂಗಳಿಗೆ 8ರಿಂದ 10 ಸಾವಿರದವರೆಗೆ ಸಂಬಳ ಬರುತ್ತದೆ. 1 ಗ್ರಾಂ ಚಿನ್ನಕ್ಕೆ 2500 ವೆಚ್ಚವಾಗುತ್ತದೆ. ನನ್ನ ಸಂಬಳದ ಒಂದು ಭಾಗವನ್ನು ಇದಕ್ಕಾಗಿ ಮೀಸಲಿಟ್ಟಿದ್ದೇನೆ ಎನ್ನುತ್ತಾರೆ ರಹೀಮ್‌.

Leave a Reply

Your email address will not be published.

Social Media Auto Publish Powered By : XYZScripts.com