ಏಷ್ಯನ್ ಬಾಕ್ಸಿಂಗ್ ಚಾಂಪಿಯನ್​ಶಿಪ್​ನಲ್ಲಿ ಮಹಿಳಾ ಆಟಗಾರ್ತಿಯರ ಕಮಾಲ್

ನವದೆಹಲಿ: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್​ನಲ್ಲಿ ಭಾರತದ ಮಹಿಳೆಯರ ಗೆಲುವಿನ ಓಟ ಮುಂದುವರೆದಿದೆ. ಭಾನುವಾರ ನಡೆದ ಪಂದ್ಯದಲ್ಲಿ ಮೂವರು ಮಹಿಳಾ ಬಾಕ್ಸರ್ ಸೆಮಿಫೈನಲ್ ಪ್ರವೇಶಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಭಾರತ ಪ್ರತಿನಿಧಿಸುತ್ತಿರುವ ಹತ್ತು ಮಂದಿಯ ಮಹಿಳಾ ಬಾಕ್ಸರ್​ಗಳಲ್ಲಿ ಏಳು ಮಂದಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮಾಜಿ ವರ್ಲ್ಡ್ ಚಾಂಪಿಯನ್ ಮೇರಿ ಕೂಮ್ ಸೇರಿದಂತೆ ಮಹಿಳಾ ಆಟಗಾರರ ಪ್ರದರ್ಶನ ಉತ್ತಮವಾಗಿದೆ. ಭಾನುವಾರ ನಡೆದ ಪಂದ್ಯಾವಳಿಯಲ್ಲಿ ಸರಿತಾ ದೇವಿ, ಸೋನಿಯಾ ಲಾಥರ್, ಲವ್ಲೀನಾ ಇಂದಿನ ಕ್ವಾಟರ್ ಫೈನಲ್ ಪಂದ್ಯ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಇಂದು ನೆಡೆದ ಪಂದ್ಯಗಳಲ್ಲಿ ಸ್ಟಾರ್ ಆಗಿ ಹೊರ ಹೊಮ್ಮಿದ್ದು ಮಾಜಿ ವರ್ಲ್ಡ್ ಚಾಂಪಿಯನ್ ಸರಿತಾ ದೇವಿ. 64 ಕೆಜಿ ಕೆಟಗರಿಯಲ್ಲಿ ಉಜ್ಬೇಕಿಸ್ತಾನದ ಮಫ್ತುನಾಕೂನ್ ಮೆಲೈವಾ ಅವರನ್ನ 5-0ಯಿಂದ ಮಣಿಸುವ ಮೂಲಕ ದಾಖಲೆ ಗೆಲುವಿನ ಸಾಧನೆ ಮಾಡಿದ್ದಾರೆ. ಇನ್ನು ಫೈನಲ್​ನಲ್ಲಿ ಚೀನಾದ ದಾನ್ ದೌರನ್ನ ಎದುರಿಸಲಿದ್ದಾರೆ.

ಹಾಗೆ 57 ಕೆಜಿ ವಿಭಾಗದಲ್ಲಿ ವರ್ಲ್ಡ್ ಚಾಂಪಿಯನ್​ಶಿಪ್​ನ ಬೆಳ್ಳಿ ಪದಕ ವಿಜೇತೆ  ಸೋನಿಯಾ 3-2 ಅಂತರದಿಂದ ಇಜ್ಯಾಮ್ ರನ್ನ ಸೋಲಿಸಿ, ಮುಂದಿನ ಹಂತದಲ್ಲಿ ಉಜ್ಬೇಕಿಸ್ತಾನದ ಮಿರ್ಜೈಬಾರನ್ನ ಎದುರಿಸಲಿದ್ದಾರೆ. 69 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಲವ್ಲೀನಾ ಮಂಗಳವಾರ ವೆಲೆಂಟಿನಾ ಖಲ್ಜೋವಾರನ್ನ ಎದುರಿಸಲಿದ್ದಾರೆ.

 

 

Leave a Reply

Your email address will not be published.