ಮುಂಬೈ ವಿಮಾನ ನಿಲ್ದಾಣದಲ್ಲಿ ಶಂಕಿತ್‌ ಐಸಿಸ್‌ ಉಗ್ರನ ಬಂಧನ

ಮುಂಬೈ : ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತ ಐಸಿಸ್‌ ಉಗ್ರನನ್ನು ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತ ಉಗ್ರ ಅಬು ಜೈದ್‌ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್‌ ಉಗ್ರ ಸಂಘಟನೆಯ ಜಾಲವನ್ನು ಹೊಂದಿರುವುದಾಗಿ ಹೇಳಲಾಗಿದೆ. ೀತ ದುಬೈನಲ್ಲಿ ವಾಸವಿದ್ದು, ಮುಂಬೈಗೆ ಬರುವ ಖಚಿತ ಮಾಹಿತಿ ಆಧಾರದ ಮೇರೆಗೆ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ಹಿಂದೆ ಅನೇಕ ಉಗ್ರರನ್ನು ಬಂಧಿಸಲಾಗಿತ್ತು. ಆಗ ಎಲ್ಲಾ ಉಗ್ರರೂ ಅಬು ಜೈದ್ ಹೆಸರು ಹೇಳಿದ್ದರು. ಆದ್ದರಿಂದ ಆತನ ಚಲನ ವಲನಗಲ ಮೇಲೆ ಕಣ್ಣಿಟ್ಟಿದ್ದ ಉತ್ತರ ಪ್ರದೇಶದ ಎಸ್‌ಟಿಐ ಅಧಿಕಾರಿಗಳು ಈತ ಭಾರತಕ್ಕೆ ಬರುತ್ತಿರುವುದರ ಬಗ್ಗೆ ಕಚಿತ ಮಾಹಿತಿ ನೀಡಿದ್ದರು.

ಈತ ಸೋಶಿಯಲ್‌ ಮೀಡಿಯಾದ ಮೂಲಕ ಯುವಕರನ್ನು ಐಸಿಸ್‌ನತ್ತ ಸೆಳೆಯುವ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Leave a Reply

Your email address will not be published.